ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರಬರಾಜು ಕೊರತೆಯಿಂದ ಆಹಾರ ಹಣದುಬ್ಬರ ಹೆಚ್ಚಳ (Food inflation | RBI | Pulses | Vegetables | Pranab Mukherjee)
Bookmark and Share Feedback Print
 
ದೇಶಾದ್ಯಂತ ಭಾರಿ ಮಳೆ ಹಾಗೂ ಪ್ರವಾಹ ಪ್ರಕೋಪಗಳಿಂದಾಗಿ, ಆಹಾರ ಧ್ಯಾನಗಳು ಹಾಗೂ ತರಕಾರಿಗಳ ಸರಬರಾಜಿಗೆ ಅಡ್ಡಿಯಾಗಿದ್ದರಿಂದ ದರಗಳಲ್ಲಿ ಶೇ.1ರಷ್ಟು ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಆಹಾರ ಹಣದುಬ್ಬರ ದರ ಸೆಪ್ಟೆಂಬರ್ ಮೂರನೇ ವಾರಂತ್ಯಕ್ಕೆ ಶೇ.16.44ರಷ್ಟು ಏರಿಕೆಯಾಗಿದ್ದು,ಆಹಾರಧ್ಯಾನಗಳು ಮತ್ತು ತರಕಾರಿ ದರಗಳಲ್ಲಿ ಶೇ.1ರಷ್ಟು ಏರಿಕೆಯಾಗಿದೆ ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ.

ಆಹಾರ ಹಣದುಬ್ಬರ ದರ ಸತತ ಏರಿಕೆಯ ಮಧ್ಯೆಯು ಕೇಂದ್ರದ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ, ಮುಂಬರುವ ಡಿಸೆಂಬರ್ ವೇಳೆಗೆ ಆಹಾರ ಹಣದುಬ್ಬರ ದರ ಶೇ.6ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಅಗಸ್ಟ್ ತಿಂಗಳಲ್ಲಿ ಆಹಾರ ಹಣದುಬ್ಬರ ದರ ಏರಿಕೆ ಇಳಿಕೆಯಾದ ನಂತರ ಸತತ ಐದು ವಾರಗಳ ಅವಧಿಯಲ್ಲಿ ಏರಿಕೆ ಕಂಡಿದೆ.

ದೆಹಲಿ, ಹರಿಯಾಣಾ, ಪಂಜಾಬ್, ಉತ್ತರಪ್ರದೇಶ, ಉತ್ತರಖಾಂಡ್, ಹಿಮಾಚಲ್ ಪ್ರದೇಶ್ ಮತ್ತು ರಾಜಾಸ್ಥಾನ ರಾಜ್ಯಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಪ್ರಕೋಪಗಳಿಂದಾಗಿ ಆಹಾರ ಧಾನ್ಯಗಳ ಸರಬರಾಜಿನಲ್ಲಿ ಅಡ್ಡಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ