ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದ್ಯುತ್ ಘಟಕ :ಎಲ್‌ಆಂಡ್‌ಟಿಗೆ 415 ಕೋಟಿ ರೂ ಗುತ್ತಿಗೆ (L&T bags | Construction work | Hindalco | Power plant)
Bookmark and Share Feedback Print
 
ದೇಶದ ಇಂಜಿನಿಯರಿಂಗ್ ಮತ್ತು ಕನ್ಸಟ್ರಕ್ಷನ್ ಕ್ಷೇತ್ರದ ದೈತ್ಯ ಕಂಪೆನಿಯಾದ ಲಾರ್ಸನ್ ಆಂಡ್ ಟೌಬ್ರೋ, ಹಿಂಡಾಲ್ಕೊ ಕಂಪೆನಿಯಿಂದ ವಿದ್ಯುತ್ ಘಟಕ ನಿರ್ಮಾಣಕ್ಕಾಗಿ 415 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ

ಆರಂಭಿಕ ಹಂತದಲ್ಲಿ ಒರಿಸ್ಸಾದ ವಿದ್ಯುತ್ ಘಟಕಕ್ಕೆ ಉಕ್ಕು ಕಾಮಗಾರಿಗಳ ನಿರ್ಮಾಣಕ್ಕಾಗಿ, 253 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಎಲ್‌ಆಂಡ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಪಂಜಾಬ್‌ನ ತಾಲ್‌ವಂಡಿ ಸಬೊ ಪವರ್ ಘಟಕ ನಿರ್ಮಾಣಕ್ಕಾಗಿ 162 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಲ್‌ಆಂಡ್ ಟಿ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಏತನ್ಮಧ್ಯೆ, ಶೇರುಪೇಟೆಯಲ್ಲಿ ಎಲ್‌ಆಂಡ್‌ಟಿ ಶೇರು ದರ ಶೇ.0.38ರಷ್ಟು ಕುಸಿತ ಕಂಡು 2,020.90 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ