ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಚ್ಚಾ ತೈಲ ಅಮುದು ವಹಿವಾಟು ಶೇ.23ರಷ್ಟು ಕುಸಿತ (Crude oil | Imports | Decline | India | Oil Ministry)
Bookmark and Share Feedback Print
 
ಭಾರತದ ಕಚ್ಚಾ ತೈಲ ಅಮುದು ವಹಿವಾಟು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಶೇ.23ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ದೇಶದ 19 ಸಾರ್ವಜನಿಕ ಹಾಗೂ ಖಾಸಗಿ ತೈಲ ಪಿಫೈನರಿ ಸಂಸ್ಥೆಗಳು ಅಕ್ಟೋಬರ್ ತಿಂಗಳ ಅವಧಿಯಲ್ಲಿ 10.1ಮಿಲಿಯನ್ ಟನ್‌ಗಳಷ್ಟು ಅಮುದು ಮಾಡಿಕೊಂಡಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವದಿಯಲ್ಲಿ 13.23 ಮಿಲಿಯನ್ ಟನ್‌ಗಳಷ್ಟು ಕಚ್ಚಾ ತೈಲವನ್ನು ಅಮುದು ಮಾಡಿಕೊಳ್ಳಲಾಗಿತ್ತು ಎಂದು ತೈಲ ಸಚಿವಾಲಯದ ಅದಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಉತ್ಪಾದಿಸುವ ತೈಲ ಮಾರಾಟದಲ್ಲಿ ಶೇ.1 ರಷ್ಟು ಏರಿಕೆಯಾಗಿ 11.647 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 11.538 ಮಿಲಿಯನ್ ಟನ್‌ಗಳಾಗಿತ್ತು ಎಂದು ಮೂಲಗಳು ತಿಳಿಸಿವೆ.

ವಾರ್ಷಿಕ ಆದಾರದನ್ವಯ ಡೀಸೆಲ್ ಬಳಕೆಯಲ್ಲಿ ಶೇ.4ರಷ್ಟು ಕುಸಿತವಾಗಿದ್ದು, 4.96 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಏತನ್ಮದ್ಯೆ, ಪೆಟ್ರೋಲ್ ಮಾರಾಟದಲ್ಲಿ ಶೇ.7.3ರಷ್ಟು ಹೆಚ್ಚಳವಾಗಿ 1.21 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ