ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೆಹಲಿ: ಈರುಳ್ಳಿ ದರ ಪ್ರತಿ ಕೆಜಿಗೆ 39 ರೂಪಾಯಿಗೆ ಕುಸಿತ (Onions | Delhi government | Outlets)
Bookmark and Share Feedback Print
 
ಗಗನಕ್ಕೇರಿದ ಈರುಳ್ಳಿ ದರಗಳ ನಿಯಂತ್ರಣಕ್ಕೆ ಪರದಾಡುತ್ತಿರುವ ಕೇಂದ್ರ ಸರಕಾರ, ನಾಳೆಯಿಂದ ದೆಹಲಿ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ಈರುಳ್ಳಿ ದರ 39-41 ರೂಪಾಯಿಗಳಿಗೆ ದೊರೆಯಲಿದೆ ಎಂದು ಹೇಳಿಕೆ ನೀಡಿದೆ.

ದೆಹಲಿ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಹಾರೂನ್ ಯುಸೂಫ್ ಮಾತನಾಡಿ, ರಾಜ್ಯ ಸರಕಾರ ರೇಶನ್ ಅಂಗಡಿಗಳು, ಕೇಂದ್ರೀಯ ಭಂಡಾರಗಳು ಮತ್ತು ಮಾರುಕಟ್ಟೆಗಳಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರದಿಂದ ನಗರದ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 39-41 ರೂಪಾಯಿಗಳಿಗೆ ದೊರೆಯಲಿದೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಲವು ಕಡೆ ದಾಳಿಗಳನ್ನು ಕೂಡಾ ನಡೆಸಲಾಗಿದೆ ಎಂದು ಸಚಿವ ಯುಸೂಪ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ