ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.12.13ಕ್ಕೆ ಏರಿಕೆ ಕಂಡ ಆಹಾರ ಹಣದುಬ್ಬರ ದರ (Price rise | Onion prices | Inflation | Food prices)
Bookmark and Share Feedback Print
 
PTI
ಈರುಳ್ಳಿ ಸೇರಿದಂತೆ ಇತರ ತರಕಾರಿ ದರಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರ ದರ, ಡಿಸೆಂಬರ್‌ 24ಕ್ಕೆ ವಾರಂತ್ಯಗೊಂಡಂತೆ ಸತತ ಮೂರನೇ ವಾರಗಳ ಅವಧಿಗೆ ಏರಿಕೆ ಕಂಡು ಶೇ.12.13 ರಷ್ಟು ಏರಿಕೆ ಕಂಡಿದೆ.

ಕಳೆದ ವಾರಂತ್ಯಕ್ಕೆ ಆಹಾರ ಹಣದುಬ್ಬರ ದರ ಶೇ.9.46ಕ್ಕೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಶೇ.12.13ರಷ್ಟು ಏರಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ ಆಧಾರದನ್ವಯ ಈರುಳ್ಳಿ ದರದಲ್ಲಿ ಶೇ.33.48 ರಷ್ಟು ದುಬಾರಿಯಾಗಿದೆ. ವಾರದ ಆಧಾರದನ್ವಯ ಶೇ.4.56ರಷ್ಟು ಚೇತರಿಕೆ ಕಂಡಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಿದೆ.

ಏತನ್ಮಧ್ಯೆ, ಹಣ್ಣು ಮತ್ತು ಹಾಲಿನ ದರದಲ್ಲಿ ಕ್ರಮವಾಗಿ ಶೇ.20.15 ಮತ್ತು ಶೇ.17.83ರಷ್ಟು ಏರಿಕೆ ಕಂಡಿದೆ.ತರಕಾರಿ ದರಗಳು ವಾರದ ಆಧಾರದನ್ವಯ ಶೇ.15.54ಕ್ಕೆ ಏರಿಕೆ ಕಂಡಿದೆ.

ಹಣದುಬ್ಬರ ದರ ಇಳಿಕೆಯಾಗುತ್ತಿಲ್ಲ. ಹಣದುಬ್ಬರ ಏರಿಕೆಯಾಗುವ ಬಿಕ್ಕಟ್ಟು ಸೃಷ್ಟಿಯಾಗುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗೌವರ್ನರ್ ಸುಬೀರ್ ಗೋಕರ್ಣ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ