ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2300 ಕೋಟಿ ವೆಚ್ಚ; ಟಾಟಾ-ನಿಪ್ಪೋನ್ ಒಪ್ಪಂದ (Nippon Steel | Tata Steel | ink | agreement | Jamshedpur)
Bookmark and Share Feedback Print
 
ಜೇಮ್‌ಶೆಡ್‌ಪುರದಲ್ಲಿ ನಿರ್ಮಾಣವಾಗಲಿರುವ ನೂತನ ದೇಶೀಯ ಆಟೋ ಸೆಕ್ಟರ್ ಸ್ಟೀಲ್ ತಯಾರಿಕಾ ಕಾರ್ಖಾನೆ ಸ್ಥಾಪನೆ ಹಿನ್ನೆಲೆಯಲ್ಲಿ ನಿಪ್ಪೋನ್ ಸ್ಟೀಲ್ ಕಂಪನಿ ಜತೆ ಜಾಯಿಂಟ್ ವೆಂಚರ್ ಮೂಲಕ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಟಾಟಾ ಸ್ಟೀಲ್ ತಿಳಿಸಿದೆ.

ಜೇಮ್‌ಶೆಡ್‌ಪುರದಲ್ಲಿ ಸುಮಾರು 2,300 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ತಯಾರಿಕಾ ಕಾರ್ಖಾನೆ ನಿರ್ಮಿಸಲಾಗುತ್ತಿದ್ದು, ಇಲ್ಲಿ ಪ್ರತಿವರ್ಷಕ್ಕೆ 60,000 ಟನ್ಸ್‌ಗಳಷ್ಟು ಸ್ಟೀಲ್ ಉತ್ಪಾದಿಸಲಾಗುವುದು ಎಂದು ಟಾಟಾ ವಿವರಿಸಿದೆ.

ಈ ಜಂಟಿ ಒಪ್ಪಂದದಲ್ಲಿ ಟಾಟಾ ಸ್ಟೀಲ್ ಶೇ.51ರಷ್ಟು ಪಾಲುದಾರಿಕೆ ಹೊಂದಿದೆ. ಉಳಿದ ಶೇ.49ರಷ್ಟು ಜಪಾನ್‌ನ ನಿಪ್ಪೋನ್ ಸ್ಟೀಲ್ ಶೇರು ಇರುವುದಾಗಿ ಟಾಟಾ ವಿವರಿಸಿದೆ. ಇದು ಸುಮಾರು 2,300 ಕೋಟಿ ರೂಪಾಯಿಯ ಬೃಹತ್ ಮೊತ್ತದ ಯೋಜನೆಯಾಗಿದೆ. 2013ರಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಟಾಟಾ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಪ್ರತಿಷ್ಠಿತ ಹಾಗೂ ಪ್ರಮುಖ ಕಂಪನಿಯಾಗಿರುವ ಟಾಟಾ ಜೆಮ್‌ಶೆಡ್‌ಪುರದಲ್ಲಿ ನಿಪ್ಪೋನ್ ಸ್ಟೀಲ್ ಜತೆ ಸೇರಿ ನಿರ್ಮಿಸುತ್ತಿರುವ ಕಾರ್ಖಾನೆಯಲ್ಲಿ ಅತ್ಯುನ್ನತ ಮಟ್ಟದ ಸ್ಟೀಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ