ದಕ್ಷಿಣ ಮುಂಬೈ ಚೌಪಟ್ಟಿ ಸಮೀಪದಲ್ಲಿರುವ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ವಸತಿ ಕಟ್ಟಡವೊಂದನ್ನು ಪೂನಾ ಮೂಲದ ಅವಿನಾಶ್ ಭೋಸ್ಲೆ ಎಂಬವರು 150 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ.
ಕಳೆದ ಶತಮಾನದಲ್ಲಿ ನಿರ್ಮಿಸಿರುವ ನಾಲ್ಕು ಅಂತಸ್ತಿನ ನೌರೋಜ್ ಕಟ್ಟಡವನ್ನು ಭೋಸ್ಲೆ ಖರೀದಿಸಿರುವುದಾಗಿ ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೇ ಕಟ್ಟಡದ ಮಾಲೀಕರ ಜತೆ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಅವರು ತಿಳಿಸಿದ್ದಾರೆ. ಕಟ್ಟಡದ ಹೊರಭಾಗ ಹೆರಿಟೇಜ್ ಮಾದರಿಯಲ್ಲಿದೆ. ಆದರೆ ಕಟ್ಟಡ ತುಂಬಾ ಶಿಥಿಲಾವಸ್ಥೆಯಲ್ಲಿದೆ ಎಂದು ವಿವರಿಸಿದ್ದಾರೆ.
ಹಳೆಯ ಕಟ್ಟಡವನ್ನು ಒಡೆದು ಇಲ್ಲಿ ಐಶಾರಾಮಿ ಅಪಾರ್ಟ್‌ಮೆಂಟ್ ಕಟ್ಟುವುದಾಗಿ ಭೋಸ್ಲೆ ತಿಳಿಸಿದ್ದಾರೆ. ನೌರೋಜ್ ಕಟ್ಟಡದ ಮೂಲ ಮಾಲೀಕರು ಕಾಥಾವಾಲಾ, ನಂತರ ಅವರು ಅದನ್ನು ಗಾಥಾನಿಸ್ ಕುಟುಂಬಕ್ಕೆ ಮಾರಾಟ ಮಾಡಿದ್ದರು.