ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗುಜರಾತ್‌ನಲ್ಲಿ 80 ಸಾವಿರ ಕೋಟಿ ಹೂಡಿಕೆ: ಅಡಾನಿ ಗ್ರೂಪ್ (Adani group | Gautam Adani | 80K cr investment | Vibrant Gujarat Summit)
Bookmark and Share Feedback Print
 
ಗುಜರಾತ್‌ನ ಬಂದರು, ಇಂಧನ ಹಾಗೂ ಮೂಲಭೂತ ಕ್ಷೇತ್ರಗಳಲ್ಲಿ ಸುಮಾರು 80 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದಾಗಿ ಇಲ್ಲಿನ ಮಹಾತ್ಮ ಮಂದಿರದಲ್ಲಿ ಆಯೋಜಿಸಿದ್ದ ವೈಬ್ರೆಂಟ್ ಗುಜರಾತ್ 2011 ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಡಾನಿ ಗ್ರೂಫ್‌ನ ಅಧ್ಯಕ್ಷ ಗೌತಮ್ ಅಡಾನಿ ಬುಧವಾರ ಘೋಷಿಸಿದ್ದಾರೆ.

ವೈಬ್ರೆಂಟ್ ಗುಜರಾತ್-2011ರ ಸಮ್ಮೇಳನದಲ್ಲಿ ನಾವು ಸುಮಾರು 80,000 ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಹೂಡಲು ನಿರ್ಧರಿಸಿರುವುದಾಗಿ ಗೌತಮ್ ಹೇಳಿದರು.

ಹಾಜಿರಾ ಮತ್ತು ದೋಲೆರಾ ಎಂಬಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಂದರು ನಿರ್ಮಾಣವಾಗುತ್ತಿದ್ದು, ಅದೇ ರೀತಿ ಮುಂದ್ರಾ ಮತ್ತು ಡಾಹೆಜ್‌ನಲ್ಲಿನ ಬಂದರನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ವರ್ಷಕ್ಕೆ 200 ಮಿಲಿಯನ್ ಟನ್‌ಗಳಷ್ಟು ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಏರಿಸುವುದೇ ನಮ್ಮ ಗುರಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಅದೇ ರೀತಿ ಮುಂದ್ರಾ ಘಟಕದಿಂದ 2000ದಿಂದ 2,600 ಮೆಗಾ ವ್ಯಾಟ್ ವಿದ್ಯುತ್ ಅನ್ನು 2012ರೊಳಗೆ ಉತ್ಪಾದಿಸುವ ಗುರಿ ಹೊಂದಲಾಗಿದೆ. ಕುಚ್‌ನಲ್ಲಿನ ಭದ್ರೇಶ್ವರ್ ಘಟಕದಲ್ಲಿ 3,300 ಮೆಗಾ ವ್ಯಾಟ್, ಡಾಹೆಜ್‌ನಲ್ಲಿ 600 ಮೆಗಾ ವ್ಯಾಟ್, ಡೋಲೆರಾದಲ್ಲಿ 4000 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಗುರಿ ಇದೆ ಎಂದು ಗೌತಮ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ