ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶುಭ ಸುದ್ದಿ: ಕ್ವಿಂಟಾಲ್‌ಗೆ 700ರಷ್ಟು ಇಳಿದ ಈರುಳ್ಳಿ ಬೆಲೆ (Onion | Lasalgaon market | APMC | Maharashtra)
Bookmark and Share Feedback Print
 
PTI
PTI
ದಿನೇ ದಿನೇ ಏರುತ್ತಿರುವ ಈರುಳ್ಳಿ ಬೆಲೆಯಿಂದ ಬೇಸತ್ತ ಸಗಟು ವ್ಯಾಪಾರಿಗಳು, ದೇಶದ ಬಹುದೊಡ್ಡ ಈರುಳ್ಳಿ ಮಾರುಕಟ್ಟೆ ಲಸಲ್‌ಗಾಂವ್‌ನಲ್ಲಿ ಹರಾಜು ಬಹಿಷ್ಕಾರ ಹಿಂತೆಗೆದುಕೊಂಡ ಮರುದಿನವೇ, ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 700 ರೂಪಾಯಿಯಷ್ಟು ಇಳಿಕೆಯಾಗಿದೆ.

ಮೂರು ದಿನದ ಬಂದ್‌ನ ನಂತರ ಮಾರುಕಟ್ಟೆ ಆರಂಭವಾದಾಗ, ಈರುಳ್ಳಿ ಬೆಲೆ ಪ್ರತೀ ಕ್ವಿಂಟಾಲ್‌ಗೆ 500 ರೂ.ನಿಂದ 3,569 ರೂ.ವರೆಗೆ ಇತ್ತು. ಸರಾಸರಿ ಬೆಲೆ ಕ್ವಿಂಟಾಲ್‌ಗೆ 2,951 ರೂ. ಗಳಷ್ಟಿತ್ತು. ಕಳೆದ ಶುಕ್ರವಾರ 4,300 ರೂ. ಗಳಷ್ಟಿದ್ದ ಬೆಲೆ ಬಂದ್‌ನ ನಂತರ 700 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಪಿಂಪಲ್‌ಗಾಂವ್ ಕೃಷಿ ಮಾರುಕಟ್ಟೆಯಲ್ಲಿ ಪ್ರತೀ ಕ್ವಿಂಟಾಲ್‌ನ ಸರಾಸರಿ ಬೆಲೆ 2,751 ರೂ. ಮತ್ತು ನಿಫಾಡ್ ಕೃಷಿಮಾರುಕಟ್ಟೆಯಲ್ಲಿ ಪ್ರತೀ ಕ್ವಿಂಟಾಲ್‌ನ ಸರಾಸರಿ ಬೆಲೆ 2,570 ರೂ. ಗಳಿಗೆ ಇಳಿಕೆ ಕಂಡಿದೆ.

ಮೂರು ದಿನ ನಡೆದ ಬಂದ್‌ನಿಂದ ಲಸಲ್‌ಗಾಂವ್‌, ಪಿಂಪಲ್‌ಗಾಂವ್, ನಿಫಾಡ್, ಮನ್ಮಾಡ್, ವಾಣಿ ಮತ್ತು ದಿಂಡೋರಿ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆದಿರಲಿಲ್ಲ.

ಈರುಳ್ಳಿ ಬೆಲೆಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕೆಂದು ಸರಕಾರವು ಒತ್ತಡ ಹೇರಿದ್ದನ್ನು ಪ್ರತಿಭಟಿಸಿ ವರ್ತಕರು ಮುಷ್ಕರ ಮಾಡಿದ್ದರು. ಈರುಳ್ಳಿ ವ್ಯಾಪಾರಿಗಳ ಬೇಡಿಕೆ ಕುರಿತು ಸರಕಾರದೊಂದಿಗೆ ಸಮಾಲೋಚಿಸುವುದಾಗಿ ಮಹಾರಾಷ್ಟ್ರ ಮಾರುಕಟ್ಟೆ ಸಹಕಾರ ಸಂಸ್ಥೆಯು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂತೆಗೆದುಕೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ