ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ನು ರಿಕ್ಷಾವಾಲಾರು ನಿಮ್ಮನ್ನು ಏಮಾರಿಸೋದು ಕಷ್ಟ! (Auto Meter | IT | Tuk Tuk Meter | Mobile Application | MidHelix Technologies | Kochi)
Bookmark and Share Feedback Print
 
ಆಟೋ ರಿಕ್ಷಾದವರು ನಿಮ್ಮನ್ನು ಸುಲೀತಾ ಇದ್ದಾರಾ? ಮೀಟರ್ ಇದ್ರೂ ಮೀಟರ್ ಹಾಕದೆ ಸತಾಯಿಸ್ತಾರಾ? ಇನ್ನು ಮುಂದೆ ಗ್ರಾಹಕರನ್ನು ಬೆಪ್ಪುತಕ್ಕಡಿಗಳನ್ನಾಗಿಸಿ, ಜಾಸ್ತಿ ದುಡ್ಡು ಸುಲಿಗೆ ಮಾಡುವುದು, ಕಿರಿಕ್ ಮಾಡುವುದು ಸಾಧ್ಯವಾಗದೇ ಇರುವ ದಿನಗಳು ದೂರವಿಲ್ಲ.

ಹೌದು, ಕೇರಳದ ಕೊಚ್ಚಿಯ ಐಟಿ ಉದ್ಯೋಗಿಗಳ ತಂಡವೊಂದು 'ಟಕ್ ಟಕ್' ಮೀಟರ್ ಎಂಬ ಮೊಬೈಲ್ ಅಪ್ಲಿಕೇಶನ್ ಒಂದನ್ನು ರೂಪಿಸಿದ್ದು, ಇದು ಆಟೋ ಚಾಲಕರು, ಎಷ್ಟು ದೂರ ಒಯ್ದಿದ್ದಾರೋ ಅಷ್ಟೇ ಹಣ ಪಾವತಿ ಮಾಡಲು ಪ್ರಯಾಣಿಕರಿಗೆ ನೆರವಾಗುತ್ತದೆ.

ಇದನ್ನು ರೂಪಿಸಿದ್ದು ಕೊಚ್ಚಿಯ ಐಟಿ ಸಂಸ್ಥೆ ಮಿಡ್‌ಹೆಲಿಕ್ಸ್ ಟೆಕ್ನಾಲಜೀಸ್. ಸಹ-ಸಂಸ್ಥಾಪಕ ಮತ್ತು ಸಿಇಒ ಕ್ರಿಸಿನ್ ಎಮ್ಯಾನುಯಲ್ ಜಾರ್ಜ್ ಅವರು ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಜಿಪಿಎಸ್ ತಂತ್ರಜ್ಞಾನ ಬಳಸಿ ಪ್ರಯಾಣದ ದೂರವನ್ನು ಈ ಅಪ್ಲಿಕೇಶನ್ ಲೆಕ್ಕ ಮಾಡುತ್ತದೆ ಮತ್ತು ಇದರೊಂದಿಗೆ ಆಯಾ ಪ್ರದೇಶದ ಮೀಟರ್ ದರಕ್ಕೆ ಅನುಗುಣವಾಗಿ ದರವನ್ನೂ ಲೆಕ್ಕ ಹಾಕುತ್ತದೆ.

'ಟಕ್ ಟಕ್' ಮೀಟರಿಗೆ ಇಂಟರ್ನೆಟ್ ಸಂಪರ್ಕ ಅಗತ್ಯವಿಲ್ಲ ಅಥವಾ ಬೇರಾವುದೇ ಸರ್ವಿಸ್ ಪ್ರೊವೈಡರ್‌ಗಳ ಹಂಗೂ ಇಲ್ಲ. ತೀರಾ ಕುಗ್ರಾಮದಂಥಾ ಪ್ರದೇಶದಲ್ಲೂ ಇದನ್ನು ಬಳಸಬಹುದು. ಇದರ ಬಳಕೆಯೂ ಬಲು ಸುಲಭ.ಆಯಾ ಪ್ರದೇಶದ ದರಗಳಿಗೆ ಅನುಗುಣವಾಗಿ ಮೀಟರ್ ಶುಲ್ಕವನ್ನು ಕೂಡ ಬದಲಾಯಿಸಿಕೊಳ್ಳಬಹುದಾಗಿದೆಯಂತೆ.

ಮೊಬೈಲ್ ಫೋನಿನಲ್ಲಿರುವ ಮೀಟರ್ ಮತ್ತು ರಿಕ್ಷಾದಲ್ಲಿರುವ ಮೀಟರ್ ಎರಡನ್ನೂ ಪಕ್ಕ ಪಕ್ಕ ಇಟ್ಟು ನೋಡಿದರೆ, ಆಟೋ ರಿಕ್ಷಾಗಳ ಮೀಟರ್ ಟ್ಯಾಂಪರಿಂಗ್ ಮಾಡಲಾಗಿದೆಯೇ ಎಂಬುದನ್ನೂ ಪತ್ತೆ ಹಚ್ಚಬಹುದಾಗಿದೆ.

ಸಾರ್ವಜನಿಕರಿಗೆ ಆಟೋ ರಿಕ್ಷಾವಾಲಾಗಳಿಂದ ತೊಂದರೆಯಾಗುತ್ತಿದ್ದುದನ್ನು ಸಹಿಸಲಾರದೆ ಬಹುಶಃ ಈ ತಂತ್ರಜ್ಞರು ಇಂಥದ್ದೊಂದು ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಿದ್ದರೆ ನಮ್ಮೂರಿಗೆ ಇಂಥಹಾ ಅಪ್ಲಿಕೇಶನ್ ಬರಲಿ ಎಂದು ಹಾರೈಸ್ತೀರಾ? ಶೀಘ್ರ ಬಂದೇ ಬರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ