ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಹಣ ವಾಪಸ್ (Air ticket | CAEAC | Air India | Jet Airways)
Bookmark and Share Feedback Print
 
ಮರುಪಾವತಿಯಾಗದ ವಿಮಾನ ಟಿಕೆಟನ್ನು ಕಾದಿರಿಸಿದರೂ ನೀವು ಪ್ರಯಾಣ ಮಾಡುವುದು ಸಾಧ್ಯವಾಗಿಲ್ಲವೇ? ಹಾಗಿದ್ದರೆ ಇನ್ನುಮುಂದೆ ನೀವು ಹಣ ಕಳೆದುಕೊಳ್ಳುವುದಿಲ್ಲ.

ವಿಮಾನ ಹೊರಡಲು ಎರಡು ಗಂಟೆ ಇರುವವರೆಗೆ ಪ್ರಯಾಣಿಕರು ತಮ್ಮ ಮರುಪಾವತಿಯಾಗದ ವಿಮಾನ ಟಿಕೆಟನ್ನು ರದ್ದುಪಡಿಸಿ, ತೆರಿಗೆಗಳು, ಇಂಧನ ಮೇಲ್ತೆರಿಗೆ, ಪ್ರಯಾಣಿಕ ಸೇವಾ ಶುಲ್ಕ ಮತ್ತು ಬಳಕೆದಾರ ಅಭಿವೃದ್ಧಿ ಶುಲ್ಕಗಳನ್ನು ಹಿಂಪಡೆಯಬಹುದು. ಅಂದರೆ, ಟಿಕೆಟ್ ದರ ಮತ್ತು ದೂರವನ್ನು ಆಧರಿಸಿ, ಪ್ರಯಾಣಿಕರೊಬ್ಬರು 1300ರಿಂದ 3800 ರೂಪಾಯಿವರೆಗಿನ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಇಂಧನ ಮೇಲ್ತೆರಿಗೆಯು ಕಡಿಮೆ ಅಂತರದ ಪ್ರಯಾಣಕ್ಕೆ 1,000 ರೂ. ಮತ್ತು ದೂರದ ಅಂತರದ ಪ್ರಯಾಣಕ್ಕೆ 3,500 ರೂಪಾಯಿ ಆಗಿರುತ್ತದೆ. ಅಗ್ಗದ ದರದಲ್ಲಿ ಪ್ರಯಾಣ ಒದಗಿಸುವ ಕಂಪನಿಗಳು ಪ್ರಯಾಣಿಕ ಸೇವಾ ಶುಲ್ಕವಾಗಿ 229 ರೂ. ಮತ್ತು ಇತರ ಸೇವಾ ತೆರಿಗೆಯಾಗಿ 103 ರೂ ವಿಧಿಸುತ್ತವೆ.

ಪ್ರಯಾಣಿಕರ ಹಲದಿನಗಳ ಬೇಡಿಕೆಯಾಗಿರುವ ಈ ಕ್ರಮದ ಬಗ್ಗೆ ಕಳೆದ ತಿಂಗಳು ಏರ್‌ಲೈನ್ಸ್ ಮತ್ತು ನಾಗರಿಕ ವಿಮಾನಯಾನ ಆರ್ಥಿಕ ಸಲಹಾ ಮಂಡಳಿಯ (ಸಿಎಇಎಸಿ) ನಡುವೆ ನಡೆದ ಮಾತುಕತೆಯ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೆ ಪೂರ್ಣ ಸೇವಾ ವಿಮಾನ ಕಂಪನಿಗಳು ಪ್ರಯಾಣ ರದ್ದತಿ ಸುಂಕವನ್ನೂ ತೆಗೆದುಹಾಕಿವೆ.

ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ವಿಶೇಷವಾಗಿ ಹೋಗಿ-ಬರುವ ಟಿಕೆಟ್ ಖರೀದಿಸಿದವರಿಗೆ ಇದು ಅನುಕೂಲವಾಗಿದೆ. ಯಾಕೆಂದರೆ, ಹೋಗಿ-ಬರುವ ಟಿಕೆಟ್ ಖರೀದಿಸಿದವರು, ಕಾರಣಾಂತರಗಳಿಂದ ಹೋಗುವ ಅಥವಾ ಬರುವ- ಯಾವುದಾದರೊಂದು ಪ್ರಯಾಣವನ್ನು ತಪ್ಪಿಸಿಕೊಂಡಿದ್ದರೆ, ಅವರು ಪೂರ್ತಿ ಹಣವನ್ನು ಕಳೆದುಕೊಳ್ಳಬೇಕಾಗುತ್ತಿತ್ತು ಎಂದು ಪ್ರಯಾಣಿಕರ ಸಂಘದ ಅಧ್ಯಕ್ಷ ಡಿ.ಸುಧಾಕರ ರೆಡ್ಡಿ ತಿಳಿಸಿದ್ದಾರೆ.

ಪೂರ್ಣ ಸೇವಾ ವಿಮಾನಯಾನ ಕಂಪನಿಗಳು ಟಿಕೆಟ್ ರದ್ದತಿ ಶುಲ್ಕವನ್ನು ಕಡಿತಗೊಳಿಸಿವೆ ಎಂದಿದ್ದಾರೆ ಟ್ರಾವೆಲ್ ಏಜೆಂಟರು. ಪ್ರಸ್ತುತ ಏರ್ ಇಂಡಿಯಾ ದೇಶೀ ಪ್ರಯಾಣದ ಟಿಕೆಟ್ ರದ್ದತಿಗೆ 150 ರೂ. ಪಡೆಯುತ್ತಿದ್ದು, ಜೆಟ್ ಏರ್‌ವೇಸ್ 750 ರೂ. ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹಲವು ದಿನಗಳಿಂದ ಬಾಕಿ ಉಳಿದಿರುವ ಬೇಡಿಕೆಗಳಾದ, ದರಗಳಲ್ಲಿ ಪಾರದರ್ಶಕತೆಯ ಕೊರತೆ, ದಿಢೀರ್ ಟಿಕೆಟ್ ದರ ಏರಿಕೆ ನಿಯಂತ್ರಣ ಮತ್ತು ಓಂಬುಡ್ಸ್‌ಮನ್ ನೇಮಕ ಮುಂತಾದ ದೀರ್ಘಕಾಲದ ಬೇಡಿಕೆಗಳನ್ನು ಆಡಳಿತ ಮಂಡಳಿ ಮತ್ತು ಸಿಎಇಎಸಿ ಈಡೇರಿಸಲು ಸಾಧ್ಯವಾಗಿದೆ ಎಂದು ಪ್ರಯಾಣಿಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ