ಸಾಮಾಜಿಕ ನೆಟ್‌ವರ್ಕ್ ತಾಣಗಳನ್ನು ಸಂಪರ್ಕದಲ್ಲಿ ತೊಡಗುವ ಯುವಕರನ್ನು ಗುರಿಯಾಗಿಸಿಕೊಂಡು ಜಗದ್ವಿಖ್ಯಾತ ಮೊಬೈಲ್ ತಯಾರಿಕೆ ಸಂಸ್ಥೆ ನೋಕಿಯಾ, 'ಕ್ವೆರ್ಟಿ' ಮಾಡೆಲ್ ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.
ನೋಕಿಯಾ ಎಕ್ಸ್2-01ಕ್ವೆರ್ಟಿ ಮಾಡೆಲ್ ಮೊಬೈಲ್ ಬಣ್ಣದ ವಿನ್ಯಾಸವನ್ನು ಹೊಂದಿದ್ದು, ಸಂದೇಶ ರವಾನೆಗಾಗಿ ವಿಶಿಷ್ಷ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ನೋಕಿಯಾ ಇಂಡಿಯಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಸ್ಮಿತ್ ಗಾಂಧಿ ತಿಳಿಸಿದ್ದಾರೆ.
ಮೊಬೈಲ್‌ನ ಇತರ ಮಾಡೆಲ್‌ಗಳಿಗೆ ಹೋಲಿಸಿದಲ್ಲಿ, ಕ್ವೆರ್ಟಿ ಮಾಡೆಲ್ ಫೋನ್‌ಗಳು ಸಂದೇಶ ರವಾನೆ ಮತ್ತು ಇ-ಮೇಲ್‌ಗಳನ್ನು ವೇಗವಾಗಿ ರವಾನಿಸಬಹುದು ಎಂದು ಹೇಳಿದ್ದಾರೆ.
ಇಂಟರ್‌ನೆಟ್ ಮತ್ತು ಸಾಮಾಜಿಕ ಸಂಪರ್ಕ ತಾಣಗಳಿಗೆ ಸಂಪರ್ಕಿಸ ಬಯಸುವ ಯುವಕರನ್ನು ಗುರಿಯಾಗಿಸಿಕೊಂಡು ಎಕ್ಸ್2-01 ಮಾಡೆಲ್ ರೂಪಿಸಲಾಗಿದೆ ಎಂದು ಗಾಂಧಿ ವಿವರಣೆ ನೀಡಿದ್ದಾರೆ.
ನೂತನ 3ಜಿ ತರಂಗಾಂತರ ಹೊಂದಿರುವ ಫೋನ್‌ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, 3ಜಿ ಹೊಂದಿರುವ ಹೆಚ್ಚಿನ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಶೀಘ್ರದಲ್ಲಿ ಬರಲಿವೆ.
ಕಳೆದ ಕೆಲ ವರ್ಷಗಳಿಂದ ದೇಶದ ನಗರ ಕೇಂದ್ರಗಳಿಗೆ ಹೋಲಿಸಿದಲ್ಲಿ, ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ವಹಿವಾಟು ಚೇತರಿಕೆ ಕಂಡಿದೆ ಎಂದು ನೋಕಿಯಾ ಇಂಡಿಯಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಸ್ಮಿತ್ ಗಾಂಧಿ ತಿಳಿಸಿದ್ದಾರೆ.