ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದುಬಾರಿ ತರಕಾರಿ: ಶೇ.17.05ಕ್ಕೆ ತಲುಪಿದ ಆಹಾರ ಹಣದುಬ್ಬರ ದರ (Food inflation | Costlier vegetables | Onion prices | Vegetables)
PTI
ತರಕಾರಿ, ಹಣ್ಣು ಮತ್ತು ಹಾಲಿನ ದರ ಏರಿಕೆಯಿಂದಾಗಿ, ಆಹಾರ ಹಣದುಬ್ಬರ ದರ ಜನೆವರಿ 22ಕ್ಕೆ ವಾರಂತ್ಯಗೊಂಡಂತೆ ಸತತ ಎರಡ ವಾರ ಏರಿಕೆ ಕಂಡು ಶೇ.17.05ಕ್ಕೆ ತಲುಪಿದೆ.

ಹಿಂದಿನ ವಾರದ ಅವಧಿಯ ಮುಕ್ತಾಯಕ್ಕೆ, ಆಹಾರ ಹಣದುಬ್ಬರ ದರ ಶೇ.15.57ರಷ್ಟಾಗಿತ್ತು. ಜನೆವರಿ22ಕ್ಕೆ ವಾರಂತ್ಯಗೊಂಡಂತೆ ಶೇ.1.48ರಷ್ಟು ಏರಿಕೆಯಾಗಿದೆ.

ವಾರ್ಷಿಕ ಆಧಾರದನ್ವಯ ಈರುಳ್ಳಿ ದರದಲ್ಲಿ ಶೇ.130.41ರಷ್ಟು ಏರಿಕೆಯಾಗಿದೆ. ತರಕಾರಿ ದರಗಳಲ್ಲಿ ಶೇ.77.05ರಷ್ಟು ಗಗನಕ್ಕೇರಿದೆ. ಆಲೂಗಡ್ಡೆ ದರದಲ್ಲಿ ಕೂಡಾ ಶೇ6.22ರಷ್ಟು ದುಬಾರಿಯಾಗಿದೆ ಎಂದು ಮಾರುಕಟಟೆಯ ಮೂಲಗಳು ತಿಳಿಸಿವೆ.

ಹಣ್ಣು ಮತ್ತು ಹಾಲಿನ ದರದಲ್ಲಿ ಕೂಡಾ, ಕ್ರಮವಾಗಿ ಶೇ.15.47 ಮತ್ತು ಶೇ.11.41ರಷ್ಟು ಏರಿಕೆಯಾಗಿದೆ. ಆಹಾರೇತರ ವಸ್ತುಗಳು ಮತ್ತು ಇಂಧನ ಹಣದುಬ್ಬರ ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ