ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ 11 ಲಕ್ಷ ಗ್ರಾಹಕರ ಲಗ್ಗೆ (MNP | Subscribers | TRAI | Service provider)
PTI
ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಜಾರಿಗೆ ಬಂದ ಕೇವಲ ಹದಿನೈದು ದಿನಗಳೊಳಗಾಗಿ, 11 ಲಕ್ಷ ಮೊಬೈಲ್ ಬಳಕೆದಾರರು ತಮ್ಮ ಸೇವಾ ಕಂಪೆನಿಯನ್ನು ಬದಲಿಸಿದ್ದಾರೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.

ಟೆಲಿಕಾಂ ಕಂಪೆನಿಗಳ ವರದಿಗಳ ಪ್ರಕಾರ ಎಂಎನ್‌ಪಿ(ಮೊಬೈಲ್ ನಂಬರ್ ಪೋರ್ಟೆಬಿಲಿಟಿ)ಗೆ 11 ಲಕ್ಷ ಮೊಬೈಲ್ ಗ್ರಾಹಕರು ಮನವಿ ಸಲ್ಲಿಸಿದ್ದಾರೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೇವೆ,ಹರಿಯಾಣಾದಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳ ಅವಧಿಯಲ್ಲಿ ಆರಂಭಿಸಲಾಗಿದೆ.

ಐಡಿಯಾ ಸೆಲ್ಯೂಲರ್ ಮತ್ತು ವೋಡಾಫೋನ್ ಕಂಪೆನಿಗಳು ಇತರ ಟೆಲಿಕಾಂ ಕಂಪೆನಿಗಳ ಗ್ರಾಹಕರನ್ನು ಸೆಳೆಯಲು ಹಲವು ಕಸರತ್ತುಗಳನ್ನು ಆರಂಭಿಸಿವೆ ಎಂದು ಹೇಳಿದ್ದಾರೆ.

ಪ್ರಸ್ತುತವಿರುವ ಟೆಲಿಕಾಂ ಕಂಪೆನಿಗಳ ಸೇವಾಲಭ್ಯತೆ, ನೆಟ್‌ವರ್ಕ್ ಕವರೇಜ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರು, ಇತರ ಕಂಪೆನಿಗಳತ್ತ ಗಮನಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಪಡೆಯುವ ಗ್ರಾಹಕರು ತಮ್ಮ ನೆಟ್‌ವರ್ಕ್ ಬದಲಿಸಲು ಗರಿಷ್ಠ 19 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಏತನ್ಮಧ್ಯೆ, ಗ್ರಾಹಕರು ಎಂಎನ್‌ಪಿ ಸೇವೆಯನ್ನು ಪಡೆಯಲು ಪ್ರಸ್ತುತ ಪಡೆಯುತ್ತಿರುವ ಟೆಲಿಕಾಂ ಕಂಪೆನಿಯ ಸೇವೆಯನ್ನು ಮೂರು ತಿಂಗಳುಗಳ ಕಾಲ ಮುಂದುವರಿಸಬೇಕಾಗುತ್ತದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.
ಇವನ್ನೂ ಓದಿ