ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ನಿಯಂತ್ರಣಕ್ಕೆ ಸರಕಾರದ ಬಳಿ ಜಾದು ದ್ವೀಪವಿಲ್ಲ:ಮುಖರ್ಜಿ (Government | Inflation | Magic lamp | Food inflation)
PTI
ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ತಕ್ಷಣದಲ್ಲಿ ಹಣದುಬ್ಬರ ಇಳಿಕೆಯಾಗುವಂತೆ ಮಾಡಲು ಕೇಂದ್ರ ಸರಕಾರದ ಬಳಿ ಅಲ್ಲಾವುದ್ದೀನ್ ಜಾದು ದ್ವೀಪವಿಲ್ಲ ಎಂದು ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಕೇಂದ್ರ ಸರಕಾರದ ಬಳಿ ಮಾಂತ್ರಿಕ ದಂಡ ಅಥವಾ ಅಲ್ಲಾವುದ್ದೀನ್ ದ್ವೀಪವಾಗಲಿ ಇಲ್ಲ. ಜಾದು ದ್ವೀಪವನ್ನು ತಿರುಚಿ ಹಣದುಬ್ಬರ ದರವನ್ನು ಇಳಿಕೆ ಮಾಡಬಹುದು ಎಂದು ನೀವು ನಿರೀಕ್ಷಿಸಬಾರದು ಎಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಏರಿಕೆ ನಿಯತ್ರಣಕ್ಕಾಗಿ ಆರ್ಥಿಕ ನೀತಿಗಳಲ್ಲಿ ಬದಲಾವಣೆ ತಂದಿದೆ. ರೆಪೋ ದರಗಳಲ್ಲಿ ಕೂಡಾ ಏರಿಕೆಗೊಳಿಸಿದೆ ಎಂದು ವಿವರಣೆ ನೀಡಿದ್ದಾರೆ.

ಹಣ್ಣು, ಹಾಲು, ಮಾಂಸ, ಮೊಟ್ಟೆ ದರಗಳಲ್ಲಿ ಏರಿಕೆಯಾಗಿದ್ದರಿಂದ, ಜನೆವರಿ22ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.17ರ ಗಡಿಯನ್ನು ದಾಟಿದೆ.ಡಿಸೆಂಬರ್ ಅವಧಿಯಲ್ಲಿ ಹಣದುಬ್ಬರ ದರ ಶೇ.8.43ಕ್ಕೆ ಏರಿಕೆಯಾಗಿದೆ.

ಏತನ್ಮಧ್ಯೆ, ಭಾರತದ ಆರ್ಥಿಕತೆ ಆರ್ಥಿಕ ವರ್ಷಾಂತ್ಯಕ್ಕೆ ಶೇ.8.8-9.0ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆಧರೆ, ಹಣದುಬ್ಬರ ದರ ಏರಿಕೆಯಿಂದಾಗಿ ಆರ್ಥಿಕ ವೇಗಕ್ಕೆ ಕಡಿವಾಣ ಹಾಕಿದಂತಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಇವನ್ನೂ ಓದಿ