ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಳು ವಾರಗಳ ಇಳಿಕೆ ಕಂಡ ಆಹಾರ ಹಣದುಬ್ಬರ ದರ (Food inflation | Pulses | Vegetables | Government)
PTI
ದುಬಾರಿ ತರಕಾರಿ ದರದ ಮಧ್ಯೆಯು ದ್ವಿದಳ ಧಾನ್ಯಗಳ ದರ ಇಳಿಕೆಯಿಂದಾಗಿ, ಆಹಾರ ಹಣದುಬ್ಬರ ದರ ಜನೆವರಿ 29ಕ್ಕೆ ವಾರಂತ್ಯಗೊಂಡಂತೆ ಏಳು ವಾರಗಳ ಕುಸಿತ ಕಂಡು ಶೇ.13.07ಕ್ಕೆ ತಲುಪಿದೆ.

ಸತತ ಎರಡು ವಾರಗಳ ಏರಿಕೆಯನ್ನು ಅಂತ್ಯಗೊಳಿಸಿದ ಆಹಾರ ಹಣದುಬ್ಬರ ದರ, ಜನೆವರಿ 22ಕ್ಕೆ ವಾರಂತ್ಯಗೊಂಡಂತೆ ಶೇ.17.05ರಿಂದ ಶೇ.4ರಷ್ಟು ಕುಸಿತಗೊಂಡು ಶೇ.13.07ಕ್ಕೆ ಇಳಿಕೆಯಾಗಿದೆ.

ವಾರ್ಷಿಕ ಆಧಾರದನ್ವಯ, ಆಲೂಗಡ್ಡೆ ದರದಲ್ಲಿ ಶೇ.8.87ರಷ್ಟು ಕುಸಿತ ಕಂಡಿದೆ. ಏತನ್ಮಧ್ಯೆ, ದ್ವಿದಳ ಧಾನ್ಯ ದರಗಳಲ್ಲಿ ಶೇ.8.63 ಮತ್ತು ಗೋಧಿ ದರದಲ್ಲಿ ಶೇ.3.58ರಷ್ಟು ಕುಸಿತವಾಗಿದೆ ಎಂದು ಸರಕಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಿದೆ.

ಜನೆವರಿ 22ಕ್ಕೆ ವಾರಂತ್ಯಗೊಂಡಂತೆ ಈರುಳ್ಳಿ ದರ ದ್ವಿಗುಣವಾಗಿತ್ತು. ಪ್ರಸಕ್ತ ವಾರದಲ್ಲಿ ಈರುಳ್ಳಿ ದರದಲ್ಲಿ ಕುಸಿತವಾಗಿದೆ. ವಾರ್ಷಿಕ ಆಧಾರದನ್ವಯ ತರಕಾರಿ ದರಗಳಲ್ಲಿ ಕೂಡಾ ಶೇ.44.34ರಷ್ಟು ಏರಿಕೆಯಾಗಿದೆ.

ಹಣ್ಣು ಮತ್ತು ಹಾಲು ದರಗಳಲ್ಲಿ ಕ್ರಮವಾಗಿ ಶೇ.10.46 ಮತ್ತು ಶೇ.11.66 ರಷ್ಟು ದುಬಾರಿಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಇವನ್ನೂ ಓದಿ