ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.11.40ಕ್ಕೆ ಏರಿಕೆ ಕಂಡ ಆಹಾರ ಹಣದುಬ್ಬರ ದರ (Food inflation | Government data | Fuel price | Food price | Inflation)
PTI
ದೇಶದ ಆಹಾರ ಸೂಚ್ಯಂಕ ದರ ಫೆಬ್ರವರಿ 12ಕ್ಕೆ ವಾರಂತ್ಯಗೊಂಡಂತೆ ಶೇ.11.49ಕ್ಕೆ ಏರಿಕೆಯಾಗಿದ್ದು, ಇಂಧನ ಸೂಚ್ಯಂಕ ದರ ಕೂಡಾ ಶೇ.12.14ಕ್ಕೆ ಏರಿಕೆ ಕಂಡಿದೆ ಎಂದು ಸರಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ ವಾರದ ಅವಧಿಯಲ್ಲಿ, ವಾರ್ಷಿಕ ಆಹಾರ ಹಣದುಬ್ಬರ ದರ ಶೇ11.05ಕ್ಕೆ ತಲುಪಿತ್ತು. ಇಂಧನ ಸೂಚ್ಯಂಕ ದರ ಕೂಡಾ ಶೇ.11.92ಕ್ಕೆ ಏರಿಕೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರದ ಅವಧಿಯಲ್ಲಿ ಪ್ರಾಥಮಿಕ ವಸ್ತುಗಳ ದರ ಸೂಚ್ಯಂಕ ಶೇ.15.77ಕ್ಕೆ ಏರಿಕೆಯಾಗಿದೆ. ಕಳೆದ ವಾರದ ಅವಧಿಯಲ್ಲಿ ಶೇ.14.59ಕ್ಕೆ ತಲುಪಿತ್ತು.

ಸಗಟು ಸೂಚ್ಯಂಕ ದರ, ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.8.43ಕ್ಕೆ ತಲುಪಿತ್ತು. ಜನೆವರಿ ತಿಂಗಳ ಅವಧಿಯಲ್ಲಿ ಶೇ.8.23ಕ್ಕೆ ಇಳಿಕೆಯಾಗಿದೆ

ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಹಣದುಬ್ಬರ ದರ ಶೇ.9ಕ್ಕೆ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಣ್ಣು, ಹಾಲು, ತರಕಾರಿ, ಮೊಟ್ಟೆ-ಮಾಂಸ-ಮೀನು, ದ್ವಿದಳ ಧಾನ್ಯಗಳು, ಇಂಧನ ಮತ್ತು ವಿದ್ಯುತ್, ಜವಳಿ, ಉಕ್ಕು ಕ್ಷೇತ್ರದ ದರಗಳಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ಮತ್ತು ಒಟ್ಟಾರೆ ಹಣದುಬ್ಬರ ದರದಲ್ಲಿ ಏರಿಕೆಯಾಗಿದೆ ಎಂದು ಸಿಎಂಐಇ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ