ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ಯಾಗೋರ್, ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ವಿಶೇಷ ರೈಲು (Rabindranath Tagore | Swami Vivekananda | Birth anniversaries | Special trains)
PTI
ಕವಿ ರವೀಂದ್ರನಾಥ್ ಟ್ಯಾಗೋರ್ ಹಾಗೂ ಸ್ವಾಮಿ ವಿವೇಕಾನಂದ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ, ಎರಡು ವಿಶೇಷ ರೈಲುಗಳನ್ನು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಶ್ರೇಷ್ಠ ಕವಿಯಾದ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ಗೌರವಾರ್ಪಣೆ ತೋರಲು ಕವಿ ಗುರು ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ವಿಶೇಷ ರೈಲುಗಳು ಈ ಕೆಳ ಕಂಡ ಮಾರ್ಗಗಳಲ್ಲಿ ಸಂಚರಿಸುತ್ತದೆ ಎಂದು ಹೇಳಿದ್ದಾರೆ.

1 ಹೌರಾ-ಆಜೀಮ್‌ಗಂಜ್ ಎಕ್ಸ್‌ಪ್ರೆಸ್(ಪ್ರತಿನಿತ್ಯ) ವಾಯಾ ಸಾಗರ್‌ಡಿಘಿ

2 ಗುವಾಹಟಿ-ಜೈಪುರ್ ಎಕ್ಸ್‌ಪ್ರೆಸ್ (ವಾರಕ್ಕೆ) ವಾಯಾ, ಕಾಸ್‌ಗಂಜ್-ಫೈಜಾಬಾದ್-ಗೋರಖ್‌ಪುರ್-ಕೊಕ್ರಾಜ್‌ಹಾರ್

3 ಹಾರಾ-ಬೋಲ್‌ಪುರ್ ಎಕ್ಸ್‌ಪ್ರೆಸ್(ಪ್ರತಿನಿತ್ಯ)

4 ಹೌರಾ-ಪೋರಬಂದರ್ ಎಕ್ಸ್‌ಪ್ರೆಸ್ (ವಾರಕ್ಕೆ)

2013ರಲ್ಲಿ ಆಚರಿಸಲಾಗುವ ಸ್ವಾಮಿ ವಿವೇಕಾನಂದ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ, ಪ್ರಥಮ ಬಾರಿಗೆ ವಿವೇಕ್ ಎಕ್ಸ್‌ಪ್ರೆಸ್‌ ವಿಶೇಷ ರೈಲುಗಳನ್ನು ಘೋಷಿಸಲಾಗಿದ್ದು, ನಾಲ್ಕು ರೈಲು ಮಾರ್ಗಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

1 ದಿಬುರ್‌ಘರ್-ತಿರುವನಂತಪುರಂ-ಕನ್ಯಾಕುಮಾರಿ ಎಕ್ಸ್‌ಪ್ರೆಸ್(ವಾರಕ್ಕೆ) ವಾಯಾ ಕೊಕ್ರಾಜ್‌ಹಾರ್.

2 ದ್ವಾರಕಾ-ಟುಟಿಕೋರಿನ್ ಎಕ್ಸ್‌ಪ್ರೆಸ್ (ವಾರಕ್ಕೆ) ವಾಯಾ ವಾಡಿ ಮೂಲಕ.

3 ಹೌರಾ-ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೆ) ವಾಯಾ ಪಾಲ್‌ಘಾಟ್

4 ಬಾಂದ್ರಾ(ಟಿ)-ಜಮ್ಮು ತವಿ ಎಕ್ಸ್‌ಪ್ರೆಸ್(ವಾರಕ್ಕೆ) ವಾಯ ಮಾರ್ವಾರ್-ದೇಗಣಾ-ರತನ್‌ಘರ್-ಜಖಾಲ್-ಲೂಧಿಯಾನಾ ಮಾರ್ಗವಾಗಿ ಸಂಚರಿಸುತ್ತದೆ.
ಇವನ್ನೂ ಓದಿ