ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಮೊಬೈಲ್ ಗ್ರಾಹಕರ ಸಂಖ್ಯೆ 771.18 ಮಿಲಿಯನ್‌ (Mobile subscribers | India | TRAI | Data)
ಜನೆವರಿ ತಿಂಗಳ ಅವಧಿಯಲ್ಲಿ 18.99 ಮಿಲಿಯನ್ ಗ್ರಾಹಕರ ಸೇರ್ಪಡೆಯೊಂದಿಗೆ ದೇಶದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 771.18 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಬಹಿರಂಗಪಡಿಸಿದೆ.

ಟ್ರಾಯ್ ವರದಿ ಪ್ರಕಾರ, ಮೊಬೈಲ್ ಬಳಕೆದಾರರ ಸಂಖ್ಯೆ ಜನೆವರಿ ತಿಂಗಳ ಮುಕ್ತಾಯಕ್ಕೆ ಶೇ.2.52ರಷ್ಟು ಏರಿಕೆ ಕಂಡು 771.18 ಮಿಲಿಯನ್‌ಗಳಿಗೆ ತಲುಪಿದೆ.ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 752.19 ಮಿಲಿಯನ್‌ಗಳಾಗಿತ್ತು ಎಂದು ತಿಳಿಸಿದೆ.

ಪಟ್ಟಣ ಹಾಗೂ ನಗರಗಳ ಮೊಬೈಲ್ ಗ್ರಾಹಕರ ಪಾಲು ಶೇ.66.65ರಿಂದ ಶೇ.66.42ಕ್ಕೆ ಇಳಿಕೆಯಾಗಿದೆ.ಗ್ರಾಮೀಣ ಕ್ಷೇತ್ರಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ ಶೇ.33.35ರಿಂದ ಶೇ.33.58ಕ್ಕೆ ಏರಿಕೆಯಾಗಿದೆ.

ದೇಶದ ಒಟ್ಟು ದೂರವಾಣಿ ಗ್ರಾಹಕರ ಸಂಖ್ಯೆಯಲ್ಲಿ ಶೇ.2.39ರಷ್ಟು ಏರಿಕೆಯಾಗಿ 806.13 ಮಿಲಿಯನ್‌ಗಳಿಗೆ ತಲುಪಿದೆ. ದೇಶದ ಒಟ್ಟಾರೆ ಟೆಲಿ ಸಾಂದ್ರತೆ ಶೇ.67ರಷ್ಟಾಗಿದೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ