ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶಾದ್ಯಂತ 38 ಲಕ್ಷ ಗ್ರಾಹಕರಿಂದ ಎಂಎನ್‌ಪಿ ಅರ್ಜಿ ಸಲ್ಲಿಕೆ (Mobile Number Portability | TRAI | Mobile phone users)
PTI
ಟೆಲಿಫೋನ್ ಆಪರೇಟರ್‌ಗಳ ಸೇವೆಯಿಂದ ತೃಪ್ತರಾಗದ ಮೊಬೈಲ್ ಗ್ರಾಹಕರು, ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಮೊರೆಹೋಗುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಎಂಎನ್‌ಪಿಗೆ ಸಲ್ಲಿಸುವವರ ಸಂಖ್ಯೆ 38 ಲಕ್ಷಕ್ಕೆ ತಲುಪಲಿದೆ.

ಗುಜರಾತ್‌ನಲ್ಲಿ ಗರಿಷ್ಟ ಸಂಖ್ಯೆಯ ಗ್ರಾಹಕರು ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಮೊರೆಹೋಗಿದ್ದಾರೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.

ಟೆಲಿಫೋನ್ ಸೇವಾ ಆಪರೇಟರ್‌ಗಳು ಟ್ರಾಯ್‌ಗೆ ನೀಡಿದ ವರದಿಯ ಪ್ರಕಾರ, ಫೆಬ್ರವರಿ 2011ರ ಅಂತ್ಯಕ್ಕೆ ಎಂಎನ್‌ಪಿ ಮನವಿ ಸಲ್ಲಿಸಿದವರ ಸಂಖ್ಯೆ 38.33 ಲಕ್ಷಕ್ಕೆ ತಲುಪಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.

ಹರಿಯಾಣಾದಲ್ಲಿ ನವೆಂಬರ್ 25 ರಂದು ಆರಂಭವಾದ ಎಂಎನ್‌ಪಿ ಸೇವೆಗೆ 3.20 ಲಕ್ಷ ಗ್ರಾಹಕರು ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ನಲ್ಲಿ ಗರಿಷ್ಟ ಸಂಖ್ಯೆಯ 3.65 ಲಕ್ಷ ಗ್ರಾಹಕರು ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಮೊರೆಹೋಗಿದ್ದಾರೆ. ರಾಜಸ್ಥಾನದಲ್ಲಿ 3.14 ಲಕ್ಷ ಎಂಎನ್‌ಪಿ ಮನವಿಗಳು ಬಂದಿವೆ ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಕದಲ್ಲಿ ಎಂಎನ್‌ಪಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 3.18 ಲಕ್ಷಕ್ಕೆ ತಲುಪಿದೆ. ತಮಿಳುನಾಡಿನಲ್ಲಿ 2.76 ಲಕ್ಷಕ್ಕೆ ತಲುಪಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ 1291 ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಆಪರೇಟರ್ ಬದಲಿಸುವಂತೆ ಅರ್ಜಿ ಬಂದಿವೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ವರದಿಯಲ್ಲಿ ಬಹಿರಂಗಪಡಿಸಿದೆ.
ಇವನ್ನೂ ಓದಿ