ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಸ್ತುತವಿರುವ ಆಹಾರ ಹಣದುಬ್ಬರ ದರ ಅಧಿಕವಾಗಿದೆ: ಪ್ರಣಬ್ (Pranab Mukherjee | Government | Food inflation | General Budget)
PTI
ಪ್ರಸ್ತುತವಿರುವ ಆಹಾರ ಹಣದುಬ್ಬರ ದರ ಅಧಿಕಾವಾಗಿದೆ. ಆಹಾರ ಹಣದುಬ್ಬರ ದರ ಇಳಿಕೆಗಾಗಿ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಆಹಾರ ಹಣದುಬ್ಬರ ದರ ಶೇ.20.2ಕ್ಕೆ ತಲುಪಿತ್ತು. ಇದೀಗ ಶೇ.9.5ಕ್ಕೆ ಇಳಿಕೆಯಾಗಿದೆ. ಆದಾಗ್ಯೂ ಆಹಾರ ಹಣದುಬ್ಬರ ದರ ಅಧಿಕವಾಗಿದೆ ಎಂದು ಲೋಕಸಭೆಯಲ್ಲಿ ಸಾಮನ್ಯ ಬಜೆಟ್ ಚರ್ಚಾ ಸಂದರ್ಭದಲ್ಲಿ ಮುಖರ್ಜಿ ತಿಳಿಸಿದ್ದಾರೆ.

ಆಹಾರ ಮತ್ತು ಆಹಾರೇತರ ವಸ್ತುಗಳ ದರ ಏರಿಕೆಯಿಂದ ಹಣದುಬ್ಬರ ದರ ಏರಿಕೆಯತ್ತ ಸಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಇತರ ರಾಷ್ಟ್ರಗಳಲ್ಲಿ ಕೂಡಾ ಆಹಾರ ಹಣದುಬ್ಬರ ಏರಿಕೆ ಸಮಸ್ಯೆ ಎದುರಾಗಿದೆ ಎಂದು ವಿವರಣೆ ನೀಡಿದ್ದಾರೆ.

ಇತರ ರಾಷ್ಟ್ರಗಳು ಆಹಾರ ಹಣದುಬ್ಬರ ದರ ಏರಿಕೆಯನ್ನು ಎದುರಿಸುತ್ತಿವೆ. ಆದ್ದರಿಂದ ಭಾರತದಲ್ಲಿ ಕೂಡಾ ಆಹಾರ ಹಣದುಬ್ಬರ ದರ ಏರಿಕೆಯಾಗುತ್ತಿದೆ ಎಂದು ನಾನು ಸಮರ್ಥಿಸಿಕೊಳ್ಳುತ್ತಿಲ್ಲ.ಹಣದುಬ್ಬರ ದರ ಏರಿಕೆ ಸಮಸ್ಯೆ ವಿಶ್ವವ್ಯಾಪಿಯಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಇವನ್ನೂ ಓದಿ