ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.9.42ಕ್ಕೆ ಇಳಿಕೆ ಕಂಡ ಆಹಾರ ಹಣದುಬ್ಬರ ದರ (Price hike | Food inflation)
PTI
ತರಕಾರಿ ಹಾಗೂ ದ್ವಿದಳ ಧಾನ್ಯಗಳ ದರಗಳಲ್ಲಿ ಕುಸಿತವಾಗಿದ್ದರಿಂದ, ಆಹಾರ ಹಣದುಬ್ಬರ ದರ ಶೇ.9.42ಕ್ಕೆ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ, ಆಹಾರ ಹಣದುಬ್ಬರ ದರ ಸುರಕ್ಷಿತ ವಲಯದ ಗಡಿಯನ್ನು ದಾಟಿದೆ. ಆದರೆ, ನಿಧಾನಗತಿಯಲ್ಲಿ ಇಳಿಕೆಯಾಗುತ್ತಿರುವುದು ಕೇಂದ್ರ ಸರಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ಹಲವು ವಾರಗಳಿಂದ ಎರಡಂಕಿಗೆ ತಲುಪಿದ್ದ ಆಹಾರ ಹಣದುಬ್ಬರ ದರ ಕಳೆದ ವಾರದ ಅವಧಿಯಲ್ಲಿ ಶೇ.9.52ಕ್ಕೆ ತಲುಪಿತ್ತು. ಫೆಬ್ರವರಿ ತಿಂಗಳಾಂತ್ಯಕ್ಕೆ ಆಹಾರ ಹಣದುಬ್ಬರ ದರ ಒಂದಂಕಿಗೆ ಇಳಿಕೆ ಕಂಡಿತ್ತು.

ವಾರ್ಷಿಕ ಆಧಾರದನ್ವಯ, ಪ್ರಸಕ್ತ ವಾರದಲ್ಲಿ ಆಲೂಗಡ್ಡೆ ದರದಲ್ಲಿ ಶೇ.9ರಷ್ಟು ಇಳಿಕೆಯಾಗಿದ್ದು, ದ್ವಿದಳ ಧಾನ್ಯಗಳ ದರಗಳಲ್ಲಿ ಕೂಡಾ ಶೇ.3.05ರಷ್ಟು ಕುಸಿತವಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ ಆಧಾರದನ್ವಯ ಗೋಧಿ ಮತ್ತು ಭತ್ತದ ದರಗಳಲ್ಲಿ ಕ್ರಮವಾಗಿ ಶೇ.2.75 ಮತ್ತು ಶೇ.0.69ರಷ್ಟು ಕುಸಿತ ಕಂಡಿದೆ. ತರಕಾರಿ ದರಗಳಲ್ಲಿ ಶೇ.8.71 ಹಾಗೂ ಈರುಳ್ಳಿ ದರಗಳಲ್ಲಿ ಶೇ.6.65ರಷ್ಟು ಹೆಚ್ಚಳವಾಗಿದೆ.ಮೊಟ್ಟೆ, ಮಾಂಸ ಮತ್ತು ಮೀನು ದರಗಳಲ್ಲಿ ಶೇ.13.10 ರಷ್ಟು ಏರಿಕೆಯಾಗಿವೆ.
ಇವನ್ನೂ ಓದಿ