ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಆಹಾರ ಹಣದುಬ್ಬರ ದರ ಇಳಿಕೆ: ಸೇನ್ (Food inflation | General inflation | Planning Commission | Rabi crop)
ದೇಶದ ಕೃಷಿ ಉತ್ಪಾದನೆಯಲ್ಲಿ ಚೇತರಿಕೆ ಕಂಡಿದ್ದರಿಂದ ಆಹಾರ ಹಣದುಬ್ಬರ ದರ ಶೇ.8ಕ್ಕೆ ಇಳಿಕೆಯಾಗಲಿದ್ದು,ಹಣದುಬ್ಬರ ದರ ಶೇ.7ಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಯೋಜನಾ ಆಯೋಗದ ಸದಸ್ಯ ಅಭಿಜಿತ್ ಸೇನ್ ಹೇಳಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಮಾರ್ಚ್ 19ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.9.5ಕ್ಕೆ ತಲುಪಿದೆ. ಸಾಮಾನ್ಯ ಹಣದುಬ್ಬರ ದರ ಶೇ.8.31ಕ್ಕೆ ಏರಿಕೆಯಾಗಿದೆ.

ಪ್ರಸಕ್ತ ವಾರದ ಸಾಮಾನ್ಯ ಹಣದುಬ್ಬರ ದರ ವರದಿಯನ್ನು ಮಾಸಾಂತ್ಯಕ್ಕೆ ಪ್ರಕಟವಾಗಲಿದೆ. ಆಹಾರ ಹಣದುಬ್ಬರ ದರ ಪ್ರತಿ ವಾರ ಬಿಡುಗಡೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉತ್ತಮ ಕೃಷಿ ಉತ್ಪಾದನೆಯಿಂದಾಗಿ ಆಹಾರ ಹಣದುಬ್ಬರ ದರದಲ್ಲಿ ಶೇ.1.5ರಷ್ಟು ಇಳಿಕೆಯಾಗುವುದು ಅಗತ್ಯವಾಗಿದೆ. ಸಾಮಾನ್ಯ ಹಣದುಬ್ಬರ ದರ ಶೀಘ್ರದಲ್ಲಿ ಕುಸಿಯುವ ಸಾಧ್ಯತೆಗಳಿವೆ ಎಂದು ಸೇನ್, ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇವನ್ನೂ ಓದಿ