ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.8.18ಕ್ಕೆ ಇಳಿಕೆಯಾದ ಆಹಾರ ಹಣದುಬ್ಬರ ದರ (Food inflation | Pulses | Inflation | Fruits down)
PTI
ದ್ವಿದಳ ಧಾನ್ಯಗಳ ದರಗಳ ಇಳಿಕೆಯಿಂದಾಗಿ ಮಾರ್ಚ್ 26ಕ್ಕೆ ವಾರಂತ್ಯಗೊಂಡಂತೆ, ಆಹಾರ ಹಣದುಬ್ಬರ ದರ ಶೇ.9.18ಕ್ಕೆ ಇಳಿಕೆಯಾಗಿದೆ.

ಆಹಾರ ಹಣದುಬ್ಬರ ದರ ಹಿಂದಿನ ವಾರದ ಮುಕ್ತಾಯಕ್ಕೆ ಶೇ.9.50ಕ್ಕೆ ತಲುಪಿತ್ತು ಕಳೆದ ನವೆಂಬರ್ ತಿಂಗಳ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.8.69ಕ್ಕೆ ಇಳಿಕೆಯಾಗಿತ್ತು.

ಆಹಾರ ಹಣದುಬ್ಬರ ದರ ಸತತ ಎರಡನೇ ವಾರದ ಅವಧಿಯಲ್ಲಿ ಒಂದಂಕಿಗೆ ಮುಂದುವರಿದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಾರ್ಷಿಕ ಆಧಾರದನ್ವಯ, ವಾರದ ಪರಿಷ್ಕರಣೆಯಲ್ಲಿ ದ್ವಿದಳ ಧಾನ್ಯಗಳ ದರಗಳಲ್ಲಿ ಶೇ 5.39ಕ್ಕೆ ಇಳಿಕೆ ಕಂಡಿದೆ.

ಏತನ್ಮಧ್ಯೆ, ಇತರ ಆಹಾರ ವಸ್ತುಗಳು ದರ ಏರಿಕೆಯತ್ತ ಮುಂದುವರಿದಿವೆ. ಹಣ್ಣುಗಳ ದರಗಳಲ್ಲಿ ಶೇ.25.40 ರಷ್ಟು ಏರಿಕೆ ಕಂಡಿದ್ದು, ಮೊಟ್ಟೆ ಮತ್ತು ಮೀನು ದರಗಳಲ್ಲಿ ಶೇ.12 ರಷ್ಟು ಏರಿಕೆಯಾಗಿದೆ.
ಇವನ್ನೂ ಓದಿ