ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ಏರಿಕೆ: ಶೇ.8.55ಕ್ಕೆ ಏರಿಕೆ ಕಂಡ ಆಹಾರ ಹಣದುಬ್ಬರ ದರ (Food inflation | Fruits | Cereals | Shot up | WPI)
PTI
ಪ್ರೋಟಿನ್ ಆಧಾರಿತ ಆಹಾರ ವಸ್ತುಗಳು ದ್ವಿದಳ ಧಾನ್ಯ ಮತ್ತು ಹಣ್ಣುಗಳ ದರಗಳಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರ ಮೇ 14ಕ್ಕೆ ವಾರಂತ್ಯಗೊಂಡಂತೆ ಶೇ.8.55ಕ್ಕೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಆಹಾರ ಹಣದುಬ್ಬರ ದರ ಆಧಾರಕ್ಕೆ ಮೂಲವಾಗಿರುವ ಸಗಟು ಸೂಚ್ಯಂಕ ದರ ಕಳೆದ ಮೂರು ವಾರಗಳಲ್ಲಿ ಅವಧಿಯಲ್ಲಿ ಇಳಿಕೆ ಕಂಡಿತ್ತು. ಕಳೆದ ವಾರದ ಅವಧಿಯಲ್ಲಿ ಶೇ.7.47ಕ್ಕೆ ಇಳಿಕೆ ಕಂಡಿದ್ದ ಆಹಾರ ಹಣದುಬ್ಬರ ದರ ಇದೀಗ ಮತ್ತೆ ಶೇ.1.8 ರಷ್ಟು ಏರಿಕೆ ಕಂಡಿದೆ.

ವಾರ್ಷಿಕ ಆಧಾರದನ್ವಯ ಮೇ 14ಕ್ಕೆ ವಾರಂತ್ಯಗೊಂಡಂತೆ ದ್ವಿದಳ ಧಾನ್ಯಗಳ ದರದಲ್ಲಿ ಶೇ.5.03ರಷ್ಟು ಏರಿಕೆ ಕಂಡಿದೆ. ಈರುಳ್ಳಿ ದರದಲ್ಲಿ ಕೂಡಾ ಶೇ.8.32ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವಾರದ ಅವಧಿಯಲ್ಲಿ ಹಣ್ಣುಗಳ ದರದಲ್ಲಿ ಶೇ.32.37ರಷ್ಟು ಏರಿಕೆಯಾಗಿದ್ದು, ಹಾಲು ದರದಲ್ಲಿ ಕೂಡಾ ಶೇ.5.53ರಷ್ಟು ಏರಿಕೆ ಕಂಡಿದೆ. ಮೊಟ್ಟೆ, ಮಾಂಸ ಮತ್ತು ಮೀನು ಮಾರಾಟ ದರದಲ್ಲಿ ಶೇ.8.6ರಷ್ಟು ಏರಿಕೆಯಾಗಿದೆ.

ವಾರ್ಷಿಕ ಆಧಾರದನ್ವಯ ಭತ್ತದ ದರದಲ್ಲಿ ಶೇ.2.63ರಷ್ಟು ಏರಿಕೆಯಾಗಿದ್ದು, ಆಲೂಗಡ್ಡೆ ದರದಲ್ಲಿ ಕೂಡಾ ಶೇ.0.17ರಷ್ಟು ಏರಿಕೆ ಕಂಡಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ