ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಹಣದುಬ್ಬರ ದರದಲ್ಲಿ ಸುಧಾರಣೆ: ಪ್ರಣಬ್ (Pranab Mukherjee | Middle East)
PTI
ವಾರದ ಹಣದುಬ್ಬರ ಅಂಕಿ ಅಂಶಗಳಲ್ಲಿ ಕುಸಿತ ಕಂಡುಬರುತ್ತಿದೆ. ಮುಂಬರುವ ದಿನಗಳಲ್ಲಿ ದರ ಏರಿಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಆಹಾರೇತರ ವಸ್ತುಗಳ ಸಗಟು ಸೂಚ್ಯಂಕ ದರ ವಾಸ್ತವವಾಗಿ ಶೇ.2ರಷ್ಟು ಕುಸಿತವಾಗಿದ್ದರಿಂದ, ಮುಂದಿನ ದಿನಗಳಲ್ಲಿ ಹಣದುಬ್ಬರದಲ್ಲಿ ಸುಧಾರಣೆಗಳಾಗುವ ನಿರೀಕ್ಷೆಗಳಿವೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಹಾರ ಹಣದುಬ್ಬರ ದರ ಮೇ 21ಕ್ಕೆ ವಾರಂತ್ಯಕ್ಕೆ ಶೇ.8.06ರಷ್ಟು ಕುಸಿದಿದೆ. ಹಿಂದಿನ ವಾರದ ಅವಧಿಯಲ್ಲಿ ಶೇ.8.55ಕ್ಕೆ ತಲುಪಿತ್ತು. ಆಹಾರೇತರ ಪ್ರಾಥಮಿಕ ವಸ್ತುಗಳ ಹಣದುಬ್ಬರ ದರದಲ್ಲಿ ಶೇ.21.31ರಷ್ಟು ಕುಸಿತವಾಗಿದೆ.

ಆಹಾರ ವಸ್ತುಗಳು ಮತ್ತು ಆಹಾರೇತರ ವಸ್ತುಗಳ ದರಗಳು ನಿರಂತರವಾಗಿ ಇಳಿಕೆಯಾದಲ್ಲಿ, ಹಣದುಬ್ಬರ ದರದಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ ಎಂದು ಮುಖರ್ಜಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದರಿಂದ, ದೇಶಿಯ ಹಣದುಬ್ಬರದ ಮೇಲೆ ಪ್ರಭಾವ ಬೀರಬಹುದಾಗಿದೆ ಎಂದು ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ