ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.8.96ಕ್ಕೆ ಇಳಿಕೆಯಾದ ಆಹಾರ ಹಣದುಬ್ಬರ ದರ (Food inflation | Down | Marginally | Pulses | Vegetables.)
PTI
ದ್ವಿದಳ ಧಾನ್ಯ ಮತ್ತು ತರಕಾರಿ ದರಗಳಲ್ಲಿ ಇಳಿಕೆಯಾಗಿದ್ದರಿಂದ,ಆಹಾರ ಹಣದುಬ್ಬರ ದರ ಜೂನ್ 4ಕ್ಕೆ ವಾರಂತ್ಯಗೊಂಡಂತೆ ಶೇ.8.96ಕ್ಕೆ ಇಳಿಕೆಯಾಗಿದೆ.

ಕಳೆದ ವಾರದ ಅವಧಿಯಲ್ಲಿ ಸಗಟು ಸೂಚ್ಯಂಕ ಆಧಾರಿತ ಆಹಾರ ಹಣದುಬ್ಬರ ದರ ಶೇ.9.01ಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷದ ಜೂನ್ ತಿಂಗಳ ಅವಧಿಯಲ್ಲಿ ಶೇ.21ಕ್ಕೆ ತಲುಪಿತ್ತು ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಕೈಗಾರಿಕೆ ವೃದ್ಧಿ ದರ ಕುಸಿತ, ಆರ್ಥಿಕತೆ ಇಳಿಕೆ ಮತ್ತು ಆಹಾರ ವಸ್ತುಗಳ ದರ ಏರಿಕೆಯಿಂದಾಗಿ ವಿರೋಧ ಪಕ್ಷಗಳ ಟೀಕೆಗಳಿಗೆ ತುತ್ತಾದ ಕೇಂದ್ರ ಸರಕಾರಕ್ಕೆ,ಆಹಾರ ಹಣದುಬ್ಬರ ದರ ಅಲ್ಪ ಇಳಿಕೆ ಕಂಡಿರುವುದು ನೆಮ್ಮದಿ ತಂದಿದೆ.

ಕಳೆದ ಮೇ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.06ಕ್ಕೆ ಏರಿಕೆ ಕಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಏರಿಕೆಯನ್ನು ನಿಯಂತ್ರಿಸಲು ಕಳೆದ ಮಾರ್ಚ್ 2010ರಿಂದ ಇಲ್ಲಿಯವರೆಗೆ 10 ಬಾರಿ ರೆಪೋ ದರಗಳಲ್ಲಿ ಏರಿಕೆ ಘೋಷಿಸಿದೆ.
ಇವನ್ನೂ ಓದಿ