ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ಹೆಚ್ಚಳ: ಇನ್ನಷ್ಟು ಏರಿಕೆಯ ಆತಂಕ (Inflation nudges up | Inflation | Commerce and Industry Ministry | Food Inflation)
ನವದೆಹಲಿ: ದಿನದಿಂದ ದಿನಕ್ಕೆ ಭಾರತೀಯ ಹಣದುಬ್ಬರ ದರ ಏರಿಕೆಯಾಗುತ್ತಿರುವುದು ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶದಿಂದ ತಿಳಿದುಬಂದಿದೆ. ಕಳೆದ ಮೇ ತಿಂಗಳಲ್ಲಿ ಶೇಕಡಾ 9.06 ರಷ್ಟಿದ್ದ ಹಣದುಬ್ಬರ ದರ ಜೂನ್ ವೇಳೆಗೆ ಶೇಕಡಾ 9.44 ಕ್ಕೆ ಹೆಚ್ಚಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಲ್ಲದೆ, ಈ ಹಿಂದಿನಿಂದಲೂ ಹಣದುಬ್ಬರ ದರ ಹೆಚ್ಚಾಗುತ್ತಾ ಬರುತ್ತಿರುವುದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೊರಡಿಸಿರುವ ಅಂಕಿಅಂಶದಿಂದ ತಿಳಿದುಬಂದಿದೆ. ಅದರಂತೆ ಮಾರ್ಚ್ ತಿಂಗಳಲ್ಲಿ ಶೇಕಡಾ 8.66 ರಷ್ಟಿದ್ದ ಹಣದುಬ್ಬರ ದರ ಏಪ್ರಿಲ್ ವೇಳೆಗೆ ಶೇಕಡಾ 9.74 ಕ್ಕೆ ಏರಿಕೆಯಾಗಿದೆ.

ಸಗಟು ದರ ಸೂಚ್ಯಂಕದ ಅತಿದೊಡ್ಡ ಭಾಗವಾಗಿರುವ ಮತ್ತು ಬೆಲೆಯ ಏರಿಳಿತವನ್ನು ಅಳೆಯುವ ಅಂಶವಾಗಿರುವ ಉತ್ಪಾದನಾ ಸೂಚ್ಯಂಕವು ಶೇ.0.1ರಷ್ಟು ಏರಿಕೆ ಕಂಡಿದ್ದರೆ, ಪ್ರಾಥಮಿಕ ವಸ್ತುಗಳ ಸೂಚ್ಯಂಕವು ಶೇಕಡಾ 2.8 ರಷ್ಟು ಏರಿಕೆಯಾಗಿದೆ.

ತೈಲಬೆಲೆ ಶೇಕಡಾ 12.85ರಷ್ಟು ಹೆಚ್ಚಳದಿಂದ ಆಹಾರ ಸಾಮಗ್ರಿಗಳ ಬೆಲೆ ಕೂಡ ಜೂನ್ ವೇಳೆ ಶೇಕಡಾ 8.38 ರಷ್ಟು ಏರಿಕೆಯಾಗಿರುವುದೂ ಅಂಕಿ ಅಂಶದಿಂದ ಸ್ಪಷ್ಟವಾಗಿದೆ. ಹಣದುಬ್ಬರದ ದರ ಏರಿಕೆಯಾಗಿರುವುದರಿಂದ ರಿಸರ್ವ್ ಬ್ಯಾಂಕು ಮತ್ತೆ ಬಡ್ಡಿದರದಲ್ಲಿ ಹೆಚ್ಚಳ ಘೋಷಿಸಬಹುದೇ ಎಂಬುದು ಜನತೆಯ ಆತಂಕ.
ಇವನ್ನೂ ಓದಿ