ಶುಕ್ರವಾರ ವಹಿವಾಟು ಆರಂಭವಾದಾಗಲೇ ಮುಗ್ಗರಿಸಿದ ಮುಂಬೈ ಶೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್, ಭಾರತೀಯ ರಿಸರ್ವ್ ಬ್ಯಾಂಕು ತನ್ನ ಪ್ರಮುಖ ಬಡ್ಡಿ ದರಗಳನ್ನು ಏರಿಸಲಿದೆ ಎಂಬ ಆತಂಕದಲ್ಲಿ ಗುರುವಾರದ ನಷ್ಟವನ್ನೇ ಮುಂದುವರಿಸಿ, 90 ಅಂಶ ಕಳಚಿಕೊಂಡಿತು.
30 ಶೇರುಗಳ ಬಿಎಸ್ಇ ಸೂಚ್ಯಂಕವು 90.53 ಅಂಶ ಪತನಗೊಂಡು 19,092.29ರಲ್ಲಿ ಆರಂಭ ಕಂಡಿತು. ವಿತ್ತೀಯ, ಸ್ಥಿರಾಸ್ಥಿ, ಆಟೋ ಮತ್ತು ಲೋಹದ ಕ್ಷೇತ್ರದ ಶೇರುಗಳು ತೀವ್ರ ನಷ್ಟ ಅನುಭವಿಸಿದವು. ಹಿಂದಿನ ಅವಧಿಯಲ್ಲಿ ಸೆನ್ಸೆಕ್ಸ್ 351.28 ಅಂಶ ಕಳೆದುಕೊಂಡಿತ್ತು.
ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿ ಕೂಡ 30.20 ಅಂಶ ಕೆಳಕ್ಕಿಳಿದು ಶುಕ್ರವಾರ ಬೆಳಿಗ್ಗೆ 5721.70ರಲ್ಲಿ ಆರಂಭ ಕಂಡಿತು.