ಆಯ್ದ ಪ್ರಮುಖ ಶೇರುಗಳ ಖರೀದಿ ಪ್ರಕ್ರಿಯೆ ಮುಂದುವರಿದಿದ್ದರಿಂದ ಉತ್ತೇಜನ ಪಡೆದ ಮುಂಬೈ ಶೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್, ಬುವಾರ ವಹಿವಾಟು ಆರಂಭವಾದಾಗ 75 ಅಂಶ ಮೇಲೇರಿತು.
75.01 ಅಂಶ ಮೇಲಕ್ಕೇರಿದ 30 ಶೇರುಗಳ ಸೂಚ್ಯಂಕವು 19,167.06ರಲ್ಲಿ ವಹಿವಾಟು ಆರಂಭಿಸಿದರೆ, 50 ಶೇರುಗಳ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ 23.60 ಅಂಶ ಏರಿಕೆಯೊಂದಿಗೆ 5,747.65ರಲ್ಲಿ ತೆರೆದುಕೊಂಡಿತು.
ಹತ್ತು ದಿನಗಳ ಕುಸಿತದ ಬಳಿಕ ಕಳೆದ ಎರಡು ಅವಧಿಗಳಲ್ಲಿ ಸೆನ್ಸೆಕ್ಸ್ 230 ಅಂಶ ಗಳಿಕೆ ದಾಖಲಿಸಿ ಆಶಾವಾದ ಮೂಡಿಸಿತ್ತು. ಹಣದುಬ್ಬರ ಮತ್ತು ಬಡ್ಡಿದರ ಏರಿಕೆಯ ಸಾಧ್ಯತೆಯ ಆತಂಕದಿಂದಾಗಿ ಹೆಚ್ಚಿನ ಪ್ರಮಾಣದ ಏರಿಕೆ ಸಾಧ್ಯವಾಗುತ್ತಿಲ್ಲ ಎಂದು ಬ್ರೋಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.