ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ, ಸೆನ್ಸೆಕ್ಸ್ 69 ಅಂಶ ಏರಿಕೆ
(Sensex | Share Market | Mumbai | Nifty | Market Index | NSE | BSE)
ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ, ಸೆನ್ಸೆಕ್ಸ್ 69 ಅಂಶ ಏರಿಕೆ
ಮುಂಬೈ, ಗುರುವಾರ, 20 ಜನವರಿ 2011( 19:23 IST )
ಮೂರು ದಿನಗಳ ಕುಸಿತದ ಬಳಿಕ ಒಂದಿಷ್ಟು ಚೇತರಿಸಿಕೊಂಡ ಮುಂಬೈ ಶೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್, ಗುರುವಾರ 68 ಅಂಶ ಮೇಲಕ್ಕೇರಿ ದಿನದ ವಹಿವಾಟು ಅಂತ್ಯಗೊಳಿಸಿತು.
18892.43ರಲ್ಲಿ ಆರಂಭ ಕಂಡಿದ್ದ 30 ಶೇರುಗಳ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ದಿನದಂತ್ಯದ ವೇಳೆಗೆ 68.98 ಅಂಶ ಮೇಲಕ್ಕೇರಿ 19,047.30ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಇದು ಹಿಂದಿನ ದಿನದ ಅಂತ್ಯಕ್ಕಿಂತ ಶೇ.0.36ರಷ್ಟು ಹೆಚ್ಚು.
50 ಶೇರುಗಳ ಸಿಎನ್ಎಕ್ಸ್ ನಿಫ್ಟಿ ರಾಷ್ಟ್ರೀಯ ಸೂಚ್ಯಂಕವೂ 19.6 ಅಂಶ ಮೇಲಕ್ಕೇರಿ, 5710.65ರಲ್ಲಿ ದಿನದ ಮಾರುಕಟ್ಟೆ ವಹಿವಾಟು ಕೊನೆಗೊಳಿಸಿತು.
ಬಿಎಸ್ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ.0.19 ಮತ್ತು ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇ.0.08 ಅಂಶ ಕುಸಿತದೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ.