ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಆಹಾರ ಹಣದುಬ್ಬರ ಏರಿಕೆ; ಶೇರುಪೇಟೆ ಭಾರಿ ಕುಸಿತ (Sensex | food inflation | BSE | Nifty)
Bookmark and Share Feedback Print
 
ಆಹಾರ ಹಣದುಬ್ಬರ ದರ ಏರಿಕೆಯಾದ ಹಿನ್ನೆಲೆಯಲ್ಲಿ ಮುಂಬೈನ ಶೇರುಪೇಟೆ ಭಾರಿ ಕುಸಿತ ಅನುಭವಿಸಿದೆ. ಮುಂಬೈನ ಸಂವೇದಿ ಸೂಚ್ಯಂಕವು 285 ಪಾಯಿಂಟ್ ಕುಸಿತ ಕಂಡು 18,684.43 ಅಂಶಗಳಿಗೆ ತಲುಪಿದೆ.

ಸತತ ಎರಡು ವಾರಗಳ ಕುಸಿತ ಕಂಡ ಆಹಾರ ಹಣದುಬ್ಬರ ದರ, ಈರುಳ್ಳಿ, ತರಕಾರಿ ದರಗಳ ಏರಿಕೆಯಿಂದಾಗಿ ಜನೆವರಿ 15ಕ್ಕೆ ವಾರಂತ್ಯಗೊಂಡಂತೆ ಶೇ.15.57ಕ್ಕೆ ಏರಿಕೆ ಕಂಡಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಏರಿಕೆ ಘೋಷಿಸಿದ ಪರಿಣಾಮ ಮಂಗಳವಾರದ ವಹಿವಾಟಿನಲ್ಲೂ ಶೇರುಪೇಟೆ 182 ಅಂಶಗಳ ಕುಸಿತ ಕಂಡಿತ್ತು.

ಮತ್ತೊಂದೆಡೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ 83.10 ಪಾಯಿಂಟ್ ಕುಸಿತ ಅನುಭವಿಸಿ 5,604.30ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ