ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮಿಶ್ರ ವಹಿವಾಟು; ಮಾರುಕಟ್ಟೆ ಅಲ್ಪ ಚೇತರಿಕೆ (Indian stock market | Closing trade | Sensex | Mumbai Market)
ಆರಂಭಿಕ ವಹಿವಾಟಿನಲ್ಲಿ ಭಾರಿ ಮುನ್ನಡೆ ದಾಖಲಿಸಿದ್ದರ ಹೊರತಾಗಿಯೂ ಆನಂತರ ವಹಿವಾಟಿನಲ್ಲಿ ಹಿನ್ಮುಖದತ್ತ ಸಾಗಿತ್ತ ಮುಂಬೈನ ಬಿಎಸ್‌ಇ ಸೂಚ್ಯಂಕ ಅಂತಿಮವಾಗಿ ದಿನದ ವಹಿವಾಟಿನಲ್ಲಿ ಅಲ್ಪ ಚೇತರಿಕೆಯನ್ನು ಕಂಡಿದೆ.

ಮಿಶ್ರ ಜಾಗತಿ ವಹಿವಾಟು ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರಗಳನ್ನು ಏರಿಕೆ ಮಾಡಿರುವುದು ಮಾರುಕಟ್ಟೆ ಹಿನ್ನಡೆಗೆ ಕಾರಣವಾಗಿತ್ತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಒಂದು ಹಂತದಲ್ಲಿ 17,122.54 ಅಂಶಗಳಿಗೆ ತಲುಪಿದ್ದ ಸಂವೇದಿ ಸೂಚ್ಯಂಕವು ಆರ್‌ಬಿಐ ರೆಪೊ ಬೇಸಿಸ್ ಪಾಯಿಂಟುಗಳನ್ನು 25ಕ್ಕೆ ಏರಿಸಿದ್ದ ಬೆನ್ನಲ್ಲೇ 16,933.83 ಅಂಶಗಳಿಗೆ ಕುಸಿತವನ್ನು ಕಂಡಿತ್ತು. ಹೀಗಿದ್ದರೂ ಒಟ್ಟಾರೆಯಾಗಿ ದಿನದ ವಹಿವಾಟಿನಲ್ಲಿ 57.29 ಪಾಯಿಂಟುಗಳ ಮುನ್ನಡೆ ಸಾಧಿಸಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 8. 55 ಪಾಯಿಂಟುಗಳ ಏರಿಕೆ ಕಂಡು 5,084.25 ಅಂಶಗಳಿಗೆ ತಲುಪಿದೆ. ವಹಿವಾಟಿನ ಒಂದು ಅವಧಿಯಲ್ಲಿ ಸೂಚ್ಯಂಕವು ಗರಿಷ್ಠ 5,143.60 ಅಂಶಗಳಿಗೆ ತಲುಪಿತ್ತು. ಹಣದುಬ್ಬರವನ್ನು ನಿಯಂತ್ರಕ್ಕೆ ತರುವ ನಿಟ್ಟಿನಲ್ಲಿ ಆರ್‌ಬಿಐ ತನ್ನ ಆರ್ಥಿಕ ನೀತಿಯಲ್ಲಿ ಬಡ್ಡಿದರಗಳನ್ನು ಮತ್ತಷ್ಟು ಏರಿಕೆಗೊಳಿಸಿತ್ತು.
ಇದನ್ನು ಸಹ ಶೋಧಿಸು: ಸೂಚ್ಯಂಕ, ಶೇರುಪೇಟೆ, ಶೇರು ಮಾರುಕಟ್ಟೆ, ಮುಂಬೈ ಮಾರುಕಟ್ಟೆ, ಬಿಎಸ್ಇ, ನಿಫ್ಟಿ, ವಾಣಿಜ್ಯ, ವಾಣಿಜ್ಯ ಸುದ್ದಿ, ವಾಣಿಜ್ಯ ನಗರ, ವಾಣಿಜ್ಯ ರಾಜಧಾನಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ಶೇರು ಮಾರ್ಕೆಟ್, ಸೆನ್ಸೆಕ್ಸ್, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ, ಕನ್ನಡ ಶೇರು