ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಐಟಿ ಶೇರುಗಳ ಜಿಗಿತ; ವಾರಂತ್ಯದಲ್ಲಿ ಶೇ. 0.4ರಷ್ಟು ಏರಿಕೆ (Indian stock market | Sensex | BSE | Latest News in Kannada)
ಕಳೆದೊಂದು ವಾರದಲ್ಲಿ ಐಟಿ ಶೇರುಗಳ ಉತ್ತಮ ವಹಿವಾಟಿನಿಂದಾಗಿ ವಾರಂತ್ಯದ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕ ಶೇಕಡಾ 0.4ರಷ್ಟು ಏರುಗತಿ ಸಾಧಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿದರಗಳನ್ನು ಏರಿಕೆಗೊಳಿಸಿದ್ದರ ಹೊರತಾಗಿಯೂ ಪ್ರಬಲ ಜಾಗತಿಕ ವಹಿವಾಟಿನ ಬೆಂಬಲದೊಂದಿಗೆ ಶೇರುಪೇಟೆ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರದ ವಹಿವಾಟಿನಲ್ಲಿ 57 ಪಾಯಿಂಟ್ ಏರಿಕೆ ಕಂಡಿದ್ದ ಸಂವೇದಿ ಸೂಚ್ಯಂಕವು 16,934 ಅಂಶಗಳಿಗೆ ತಲುಪಿದ್ದವು. ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 9 ಪಾಯಿಂಟ್ ಏರಿಕೆ ಕಂಡು 5084 ಅಂಶಗಳಿಗೆ ತಲುಪಿತ್ತು. ಆ ಮೂಲಕ ವಾರಂತ್ಯದ ವಹಿವಾಟಿನಲ್ಲಿ ಉಭಯ ಸೂಚ್ಯಂಕಗಳು ಶೇಕಡಾ 0.4ರಷ್ಟು ಏರಿಕೆ ದಾಖಲಿಸಿದೆ.

ಪ್ರಸಕ್ತ ವಾರದಲ್ಲಿ ತಂತ್ರಗಾರಿಕೆ ಶೇರುಗಳು ಒಟ್ಟಾರೆ ಶೇಕಡಾ 3ರಷ್ಟು ಏರುಗತಿ ದಾಖಲಿಸಿತ್ತು. ಇದರಲ್ಲಿ ಇನ್ಭೋಸಿಸ್ ಶೇರುಗಳು ಅತಿ ಹೆಚ್ಚು ಶೇಕಡಾ 5.3ರಷ್ಟು ಏರಿಕೆ ಕಂಡಿತ್ತು.
ಇದನ್ನು ಸಹ ಶೋಧಿಸು: ಸೂಚ್ಯಂಕ, ಶೇರುಪೇಟೆ, ಶೇರು ಮಾರುಕಟ್ಟೆ, ಮುಂಬೈ ಮಾರುಕಟ್ಟೆ, ಬಿಎಸ್ಇ, ನಿಫ್ಟಿ, ವಾಣಿಜ್ಯ, ವಾಣಿಜ್ಯ ಸುದ್ದಿ, ವಾಣಿಜ್ಯ ನಗರ, ವಾಣಿಜ್ಯ ರಾಜಧಾನಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ಶೇರು ಮಾರ್ಕೆಟ್, ಸೆನ್ಸೆಕ್ಸ್, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ, ಕನ್ನಡ ಶೇರು