ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವೃದ್ಧಿದರ ಕುಸಿತದ ಭೀತಿ; ಸೂಚ್ಯಂಕ 188 ಅಂಶ ಕುಸಿತ (Indian stock market | Closing trade | Sensex | Mumbai Market)
ಜಾಗತಿಕ ಮಾರುಕಟ್ಟೆಗಳ ಜತೆ ಕೈಜೋಡಿಸಿರುವ ದೇಶಿಯ ಸೂಚ್ಯಂಕವು ಸಹ, ಆರ್ಥಿಕ ವೃದ್ಧಿದರ ಕುಸಿತದ ಭೀತಿಯ ಹಿನ್ನಲೆಯಲ್ಲಿ ದಿನದ ವಹಿವಾಟಿನಲ್ಲಿ ಭಾರಿ ಕುಸಿತವನ್ನು ಅನುಭವಿಸಿದೆ.

ಸೋಮವಾರದ ವಹಿವಾಟಿನಲ್ಲಿ 188.48 ಪಾಯಿಂಟ್ ಕುಸಿತ ಕಂಡಿರುವ ಸಂವೇದಿ ಸೂಚ್ಯಂಕವು 16,745.35 ಅಂಶಗಳಿಗೆ ತಲುಪಿದೆ. ಬಂಡವಾಳ ಸರಕುಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ಅತಿ ಹೆಚ್ಚು ಕುಸಿತವನ್ನು ಕಂಡಿವೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 52.30 ಪಾಯಿಂಟ್ ಕುಸಿತ ಕಂಡು 5,031.95 ಅಂಶಗಳಿಗೆ ತಲುಪಿದೆ. ಜಾಗತಿಕವಾಗಿ ದುರ್ಬಲ ವಹಿವಾಟು ವ್ಯಕ್ತವಾಗಿರುವುದು ಹಾಗೂ ಬಡ್ಡಿದರಗಳನ್ನು ಆರ್‌ಬಿಐ ಏರಿಕೆ ಮಾಡಿರುವುದು ಹಿನ್ನಡೆಗೆ ಕಾರಣವಾಗಿದೆ.

ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಪಿಎನ್‌ಬಿ, ಯುನಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಶೇರುಗಳು ಶೇಕಡಾ 1.17ರಷ್ಟು ಇಳಿಕೆಯನ್ನು ಕಂಡಿವೆ.
ಇದನ್ನು ಸಹ ಶೋಧಿಸು: ಸೂಚ್ಯಂಕ, ಶೇರುಪೇಟೆ, ಶೇರು ಮಾರುಕಟ್ಟೆ, ಮುಂಬೈ ಮಾರುಕಟ್ಟೆ, ಬಿಎಸ್ಇ, ನಿಫ್ಟಿ, ವಾಣಿಜ್ಯ, ವಾಣಿಜ್ಯ ಸುದ್ದಿ, ವಾಣಿಜ್ಯ ನಗರ, ವಾಣಿಜ್ಯ ರಾಜಧಾನಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ಶೇರು ಮಾರ್ಕೆಟ್, ಸೆನ್ಸೆಕ್ಸ್, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ, ಕನ್ನಡ ಶೇರು