ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ಚೇತರಿಕೆ (stock market | BSE | NSE | Indian stock market)
ರಿಟೈಲ್ ಹೂಡಿಕೆದಾರರು ನಿರ್ದಿಷ್ಟ ಶೇರುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕ ಶೇಕಡಾ 0.70ರಷ್ಟು ಚೇತರಿಕೆಯನ್ನು ಕಂಡಿದೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 117.90 ಪಾಯಿಂಟ್ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 16,863.25 ಅಂಶಗಳಿಗೆ ತಲುಪಿದೆ. ಕಳೆದ ದಿನದ ವಹಿವಾಟಿನಲ್ಲಿ ಮಾರುಕಟ್ಟೆಯು 188.48 ಅಂಶಗಳ ಭಾರಿ ಕುಸಿತವನ್ನು ಅನುಭವಿಸಿತ್ತು.

ಮತ್ತೊಂದೆಡೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 20.10 ಪಾಯಿಂಟ್ ಅಥವಾ ಶೇಕಡಾ 0.40ರಷ್ಟು ಏರಿಕೆ ಕಂಡು 5,052.05 ಅಂಶಗಳಿಗೆ ತಲುಪಿದೆ. ತಂತ್ರಗಾರಿಕೆ ಸೇರಿದಂತೆ ಪ್ರಮುಖ ಶೇರಗಳು ಧನಾತ್ಮಕ ವಹಿವಾಟನ್ನು ಕಂಡುಕೊಳ್ಳುತ್ತಿದ್ದು, ಶೇಕಡಾ 1.25ರಷ್ಟು ಏರುಗತಿ ದಾಖಲಿಸಿದೆ.

ಜಾಗತಿಕವಾಗಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರ ಹೊರತಾಗಿಯೂ ಸೂಚ್ಯಂಕ ಏರುಗತಿ ಕಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಇದನ್ನು ಸಹ ಶೋಧಿಸು: ಸೂಚ್ಯಂಕ, ಶೇರುಪೇಟೆ, ಶೇರು ಮಾರುಕಟ್ಟೆ, ಮುಂಬೈ ಮಾರುಕಟ್ಟೆ, ಬಿಎಸ್ಇ, ನಿಫ್ಟಿ, ವಾಣಿಜ್ಯ, ವಾಣಿಜ್ಯ ಸುದ್ದಿ, ವಾಣಿಜ್ಯ ನಗರ, ವಾಣಿಜ್ಯ ರಾಜಧಾನಿ, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ, ಕನ್ನಡ ಸುದ್ದಿ, ಶೇರು ಮಾರ್ಕೆಟ್, ಸೆನ್ಸೆಕ್ಸ್, ತಾಜಾ ಅಪ್ಡೇಟ್ ಸುದ್ದಿ, ಕರ್ನಾಟಕ ಮಾರುಕಟ್ಟೆ, ಬೆಂಗಳೂರು ಮಾರುಕಟ್ಟೆ, ಕನ್ನಡ ಶೇರು