ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಜ್ಮಲ್ ಪಾಕಿಸ್ತಾನಿ ಎಂದು ದೃಢಪಡಿಸಿದ ಎಫ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಜ್ಮಲ್ ಪಾಕಿಸ್ತಾನಿ ಎಂದು ದೃಢಪಡಿಸಿದ ಎಫ್‌ಬಿಐ
PTI
ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಪ್ರಶ್ನಿಸಿದ ಅಮೆರಿಕಾದ ತನಿಖಾಗಾರರು ಆತ ಪಾಕಿಸ್ತಾನಿ ಪ್ರಜೆ ಮತ್ತು ಉಗ್ರರ ದಾಳಿಯನ್ನು ಯೋಜಿಸಿ, ಕಾರ್ಯಗತಗೊಳಿಸಿದ್ದು ಲಷ್ಕರೆ ತೊಯ್ಬಾ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ ಎಂದು ರಾಜತಾಂತ್ರಿಕ ಮೂಲವೊಂದು ತಿಳಿಸಿದೆ.

ಅಮೆರಿಕಾದ ಫೆಢರಲ್ ಬ್ಯೂರೊ ಅಫ್ ಇನ್‌ವೆಸ್ಟಿಗೇಶನ್‍ನ ತನಿಖಾಗಾರರಿಗೆ ಅಜ್ಮಲ್‌ನನ್ನು ಸಂಧಿಸಿ ಪ್ರಶ್ನಿಸಲು ಒಂಬತ್ತು ಗಂಟೆಗಳ ಕಾಲ ಅವಕಾಶ ನೀಡಲಾಗಿತ್ತು. ತನಿಖೆಯ ನಂತರ ಅಜ್ಮಲ್, ಭಾರತೀಯ ಅಧಿಕಾರಿಗಳು ಹೇಳಿರುವಂತೆ ಪಾಕಿಸ್ತಾನಿ ಎಂಬ ನಿರ್ಣಯಕ್ಕೆ ತಲುಪಿದ್ದಾರೆ ಎಂದು ಮೂಲವೊಂದು ಸುದ್ದಿ ಸಂಸ್ಥೆಗೆ ತಿಳಿಸಿದೆ.

ಮುಂಬಯಿ ದಾಳಿಯ ಸಂಚು ರೂಪಿಸಿ ಉಗ್ರರನ್ನು ನಿರ್ದೇಶಿಸಿದ್ದು ಲಷ್ಕರೆ ತೊಯ್ಬಾ ಎಂಬುದಾಗಿಯೂ ಎಫ್‌ಬಿಐಗೆ ಮನದಟ್ಟಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿರುವ 'ರಾಷ್ಟ್ರರಹಿತ' ಉಗ್ರರು ಮತ್ತು ಸಂಘಟನೆಗಳ ವಿರುದ್ಧ ಕ್ಷಿಪ್ರ ಕ್ರಮ ಕೈಗೊಳ್ಳಬೇಕೆಂದು ಪಾಕ್ ಮೇಲೆ ಒತ್ತಡ ಹೇರಿರುವ ಅಮೆರಿಕಾದ ಉನ್ನತ ಅಧಿಕಾರಿಗಳಾದ ಕಾಂಡೊಲೀಸಾ ರೈಸ್ ಮತ್ತು ಅಡ್ಮಿರಲ್ ಮೈಕ್ ಮುಲ್ಲನ್ ಅವರ ಹೇಳಿಕೆಗಳಿಗೆ ಈಗ ಹೆಚ್ಚಿನ ಪುಷ್ಠಿ ಸಿಕ್ಕಂತಾಗಿದೆ.

ಪಾಕ್ ಪ್ರಧಾನಿ ಯೂಸಫ್ ರಜಾ ಗಿಲಾನಿ ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟ ಶಂಕಿತರನ್ನು ಪ್ರಶ್ನಿಸಲು ಬ್ರಿಟಿಷ್ ಪೊಲೀಸ್‌ಗೆ ಅಥವಾ ಇತರ ವಿದೇಶಿ ತನಿಖಾಗಾರರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೂ ಎಫ್‌ಬಿಐ ಭಾರತಕ್ಕೆ ಅಜ್ಮಲ್‌ನನ್ನು ಪ್ರಶ್ನಿಸಲು ಸಲ್ಲಿಸಿದಂತಹುದೇ ಮನವಿಯನ್ನು ಪಾಕ್‌ಗೂ ಸಲ್ಲಿಸಿದಲ್ಲಿ ಪಾಕಿಸ್ತಾನ ಮೊಂಡು ಹಠ ಬಿಟ್ಟು ಮಣಿಯಬೇಕಾದೀತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌ ಸಂಬಂಧಿತ ಕೊಂಡಿಗಳನ್ನು ಕತ್ತರಿಸಲಾಗುತ್ತಿದೆ
'ಪಾಕ್‌ನಲ್ಲಿರುವ ರಾಷ್ಟ್ರ ರಹಿತರು ನಮ್ಮ ಜವಾಬ್ದಾರಿ'
ಅಮೆರಿಕಾ ಅಪಹರಣ ವಿಶೇಷಜ್ಞನೇ ಅಪಹೃತ!
ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ
'ಉಗ್ರವಾದ ದಮನದ ಮೇಲೆ ಪಾಕ್ ಭವಿಷ್ಯ ನಿಂತಿದೆ'
ಶಂಕಿತರ ವಿಚಾರಣೆ ನಡೆಸಲು ಅವಕಾಶವಿಲ್ಲ: ಪಾಕ್