ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಸಬ್ ಪಾಕಿಸ್ತಾನೀಯನೇ ಅಲ್ಲ, ನಂಬಬೇಡಿ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪಾಕಿಸ್ತಾನೀಯನೇ ಅಲ್ಲ, ನಂಬಬೇಡಿ: ಪಾಕ್
PTI
ಮುಂಬಯಿ ಉಗ್ರರ ದಾಳಿಯಲ್ಲಿ ಬಂಧಿಸಲ್ಪಟ್ಟ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಬ್‌ನಿಂದ ಕಾನೂನು ಸಹಾಯ ಕೋರಿ ಯಾವುದೇ ಪತ್ರ ತಮಗೆ ತಲುಪಿಲ್ಲವೆಂದು ಬುಧವಾರ ಹೇಳಿರುವ ಪಾಕಿಸ್ತಾನ ಕಸಬ್ ಪಾಕಿಸ್ತಾನಿ ನಾಗರಿಕನಲ್ಲವೆಂಬ ತನ್ನ ನಿರಾಕರಣೆಗೆ ಅಂಟಿಕೊಂಡಿದೆ.

"ದಯವಿಟ್ಟು, ಮಾಧ್ಯಮ ವರದಿಗಳಿಗೆ ಹೆಚ್ಚಿನ ಮಹತ್ವ ಕೊಡಬೇಡಿ. ನನಗಾಗಲಿ ಅಥವಾ ಪಾಕ್ ಹೈ ಕಮಿಷನ್‌ಗಾಗಲಿ ಯಾವುದೇ ಪತ್ರ ತಲುಪಿಲ್ಲ" ಎಂದು ಪಾಕಿಸ್ತಾನದ ಹೈ ಕಮಿಷನರ್ ಶಾಹಿದ್ ಮಲ್ಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಸಬ್‌ನ ತಂದೆ ಸುದ್ದಿಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಉಗ್ರನ ಭಾವಚಿತ್ರವನ್ನು ನೋಡಿ ಆತ ತನ್ನ ಮಗನೆಂದು ಗುರುತಿಸಿರುವುದರ ಬಗ್ಗೆ ಮಲ್ಲಿಕ್‌ರನ್ನು ಪ್ರಶ್ನಿಸಿದಾಗ, "ಇಂತಹ ವಿಷಯಗಳಲ್ಲಿ ಇದನ್ನು ನಂಬಲಾಗುವುದಿಲ್ಲ... ಈ ವಿಷಯದಲ್ಲಿ ವಿವಾದಕ್ಕೆ ಅಸ್ಪದವಿಲ್ಲದ ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂತಹ ಸಾಕ್ಷಿ ಬೇಕು" ಎಂದು ಹೇಳಿದ್ದಾರೆ.

ಮುಂಬಯಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಅಪಾದಿಸಲಾಗಿರುವ ಜಾಕೀರ್-ಉರ್-ರೆಹಮಾನ್ ಲಕ್ವಿಯನ್ನು ವಿಚಾರಣೆ ನಡೆಸಲು ಅಮೆರಿಕಾದ ತನಿಖಾ ದಳ ಎಫ್‌ಬಿಐಗೆ ಅವಕಾಶ ನೀಡುವ ಕುರಿತು ಪಾಕಿಸ್ತಾನ ಚಿಂತಿಸುತ್ತಿಲ್ಲ ಎಂದು ಪಾಕ್ ಹೈ ಕಮಿಷನರ್ ಹೇಳಿದ್ದಾರೆ.

"ಪ್ರಸ್ತುತ ನಾವು ಅದರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ದಯವಿಟ್ಟು ನಮಗೆ ನಮ್ಮದೇ ರೀತಿಯಲ್ಲಿ ತನಿಖೆ ಮುಂದುವರೆಸಲು ಅವಕಾಶ ನೀಡಿ ಮತ್ತು ಇತರರಿಗೆ ತನಿಖೆ ನಡೆಸುವ ಅವಕಾಶ ನೀಡುವ ಅವಶ್ಯಕತೆ ಇದೆಯೇ ಎಂದು ನಂತರ ನೋಡಿ" ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಸೂದ್ ಕಸ್ಟಡಿಯಲ್ಲಿಲ್ಲ: ಪಾಕ್ ವಿದೇಶಾಂಗ ಸಚಿವ
'ಮಿಶನ್ ಇರಾಕ್' ಮೇ 31ಕ್ಕೆ ಕೊನೆ: ಬ್ರೌನ್
ಜಮಾತ್‌ನ ಶಾಲೆಗಳನ್ನು ಸರಕಾರ ನಡೆಸುತ್ತಂತೆ!
ಜಮಾತ್ ಬೆಂಬಲಕ್ಕೆ ಪಾಕ್-ಹಿಂದೂಗಳ ರ‌್ಯಾಲಿ
ಜಮಾತ್‌ಗೆ ಭಯೊತ್ಪಾದನೆಯ ನಂಟಿದೆ: ರೈಸ್
ಗ್ಲಾಸ್ಗೊ ಬಾಂಬ್ ದಾಳಿ: ಬಿಲಾಲ್ ಅಪರಾಧಿ