ನೇಪಾಳದಲ್ಲಿ ಹಕ್ಕಿಜ್ವರವು ವ್ಯಾಪಕವಾಗಿ ಹರಡುತ್ತಿದ್ದು, ಜಾಪಾ ಜಿಲ್ಲೆಯ ಕಕ್ಕರ್‌ವಿತ್ತಾ ಪ್ರದೇಶದ ಕೋಳಿಗಳಲ್ಲಿ ರೋಗ ಲಕ್ಷಣ ವ್ಯಾಪಕವಾಗಿ ಕಂಡುಬಂದಿದೆ. ಸರಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮೊದಲ ಹಂತದ ಕಾರ್ಯಚರಣೆಯ ಮೂರು ದಿನಗಳಲ್ಲಿ ಸುಮಾರು 13000 ಕೋಳಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |