ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದಿಗ್ಬಂಧನ ಹೇರಿದರೆ ಸ್ವಯಂರಕ್ಷಣೆಗೆ ಕ್ರಮ: ಉ.ಕೊರಿಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿಗ್ಬಂಧನ ಹೇರಿದರೆ ಸ್ವಯಂರಕ್ಷಣೆಗೆ ಕ್ರಮ: ಉ.ಕೊರಿಯ
ಅಣ್ವಸ್ತ್ರ ಪರೀಕ್ಷೆ ವಿರುದ್ಧ ವಿಶ್ವಶಕ್ತಿಗಳು ದಿಗ್ಬಂಧನ ಹೇರಿದರೆ ಸ್ವಯಂರಕ್ಷಣೆಗೆ ಹೊಸ ಕ್ರಮ ಕೈಗೊಳ್ಳುವುದಾಗಿ ಉತ್ತರಕೊರಿಯ ಶುಕ್ರವಾರ ಬೆದರಿಕೆ ಹಾಕಿದೆ. ಆದರೆ ತನ್ನ ಮಿತ್ರರಾಷ್ಟ್ರದ ರಕ್ಷಣೆಗೆ ಸಾಕಷ್ಟು ಪಡೆಗಳನ್ನು ದಕ್ಷಿಣ ಕೊರಿಯದಲ್ಲಿ ನಿಯೋಜಿಸಿರುವುದಾಗಿ ಅಮೆರಿಕ ತಿಳಿಸಿದೆ.

ಉತ್ತರ ಕೊರಿಯ ಸೋಮವಾರ ಎರಡನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗಿನಿಂದ ಉದ್ವಿಗ್ನ ವಾತಾವರಣ ಮ‌ೂಡಿದ್ದು, ದಕ್ಷಿಣ ಕೊರಿಯ ಮೇಲೆ ದಾಳಿ ನಡೆಸುವುದಾಗಿ ಉ.ಕೊರಿಯ ಎಚ್ಚರಿಕೆ ನೀಡಿತ್ತು. ಅಂತಾರಾಷ್ಟ್ರೀಯ ಖಂಡನೆಯನ್ನು ಲೆಕ್ಕಿಸದ ಉತ್ತರ ಕೊರಿಯ ವಿಶ್ವಸಂಸ್ಥೆ ವಿಧಿಸುವ ಯಾವುದೇ ಹೊಸ ದಿಗ್ಬಂಧನಗಳಿಗೆ ಪ್ರತಿಕ್ರಿಯಿಸುವುದಾಗಿ ಶಪಥ ತೊಟ್ಟಿದೆ.ವಿಶ್ವಸಂಸ್ಥೆ ಭದ್ರತಾಮಂಡಳಿ ನಮ್ಮನ್ನು ಕೆರಳಿಸಿದರೆ ನಮ್ಮ ಹೆಚ್ಚುವರಿ ಆತ್ಮರಕ್ಷಣೆ ಕ್ರಮಗಳು ಅನಿವಾರ್ಯವಾಗುತ್ತದಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯುಎನ್‌ಎಸ್‌ಸಿಯ ಯಾವುದೇ ವೈರತ್ವದ ಕ್ರಮಗಳು ಒಪ್ಪಂದದ ನಿರ್ಮ‌ೂಲನೆಗೆ ಅವಕಾಶ ಕಲ್ಪಿಸುತ್ತದೆ ಎಂದು 1950-53ರಲ್ಲಿ ಕೊರಿಯ ಯುದ್ಧದ ಅಂತ್ಯಕ್ಕೆ ಮಾಡಿಕೊಂಡ ಒಪ್ಪಂದವನ್ನು ಉಲ್ಲೇಖಿಸಿ ಹೇಳಿದೆ.ನಮ್ಮ ಸೇನೆ ಮತ್ತು ಜನತೆ ಯುಎನ್‌ಎಸ್‌ಸಿ ದಬ್ಬಾಳಿಕೆ ವಿರುದ್ಧ ಎದ್ದುನಿಂತು ಹೇಗೆ ಗೌರವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆಂದು ವಿಶ್ವಕ್ಕೆ ಪ್ರತ್ಯಕ್ಷದರ್ಶನವಾಗುತ್ತದೆಂದು ಅದು ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ 'ಆಕಾಶದಲ್ಲಿ ಕಣ್ಣು' ಪಾಕಿಸ್ತಾನಕ್ಕೆ ಅಸೂಯೆ
ಲಂಕಾ ಕಡಲತೀರದಲ್ಲಿ ತಮಿಳರ ರಹಸ್ಯ ಕಗ್ಗೊಲೆ
ಇರಾನ್ ಮಸೀದಿಯಲ್ಲಿ ಬಾಂಬ್ ಸ್ಫೋಟಕ್ಕೆ 15 ಬಲಿ
ನಮ್ಮ ವಿದ್ಯಾರ್ಥಿಗಳ ಮೇಲೆ ದಾಳಿ ನಿಲ್ಲಬೇಕು: ಭಾರತ
ತಾಲಿಬಾನ್ ಮುಖಂಡ ಮುಲ್ಲಾ ಫಜಲುಲ್ಲಾ ಸಾವು?
ಗುರುದ್ವಾರದ ಮೇಲೆ ದಾಳಿ: 6 ಶಂಕಿತರ ಬಂಧನ