ಉತ್ತರ ಕೊರಿಯ ಶುಕ್ರವಾರ ಸಮೀಪದೂರದ ಕ್ಷಿಪಣಿಯನ್ನು ಪೂರ್ವತೀರದಲ್ಲಿ ಪ್ರಯೋಗಿಸಿದ್ದು, ಈ ವಾರದಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ ಬಳಿಕ ಉತ್ತರಕೊರಿಯ ಪ್ರಯೋಗಿಸಿದ 6ನೇ ಕ್ಷಿಪಣಿಯಾಗಿದೆಯೆಂದು ದಕ್ಷಿಣ ಕೊರಿಯದ ಯಾನಪ್ ಸುದ್ದಿ ಸಂಸ್ಥೆ ತಿಳಿಸಿದೆ.
ರಕ್ಷಣಾ ಸಚಿವಾಲಯವು ಯಾವುದೇ ಪ್ರತಿಕ್ರಿಯೆಗೆ ನಿರಾಕರಿಸಿದ್ದರೂ, ಐದು ಕ್ಷಿಪಣಿ ಉಡಾವಣೆಗಳನ್ನು ಬಳಿಕ ದೃಢಪಡಿಸಲಾಗಿದೆ.ಶುಕ್ರವಾರ ಸಂಜೆ ಮತ್ತೊಂದು ಕ್ಷಿಪಣಿ ಪ್ರಯೋಗಿಸಲಾಯಿತೆಂದು ಯಾನಪ್ ಅಪರಿಚಿತ ಸೋಲ್ ಸರ್ಕಾರದ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ ಪೂರ್ವ ತೀರದಿಂದಲೇ ಎಲ್ಲ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿತ್ತೆಂದು ರಕ್ಷಣಾ ಸಚಿವಾಲಯ ತಿಳಿಸಿದ್ದು, ಉತ್ತರಕೊರಿಯ ಶಕ್ತಿಪ್ರದರ್ಶನವೆಂದು ಅದು ಬಣ್ಣಿಸಿದೆ. |