ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸಂತ್ರಸ್ತರ ಶಿಬಿರದಲ್ಲಿ ಎಲ್‌ಟಿಟಿಇ ಮಹಿಳಾನಾಯಕಿ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂತ್ರಸ್ತರ ಶಿಬಿರದಲ್ಲಿ ಎಲ್‌ಟಿಟಿಇ ಮಹಿಳಾನಾಯಕಿ ಪತ್ತೆ
ಎಲ್‌ಟಿಟಿಇ ಮಹಿಳಾ ಪಡೆಯ ರಾಜಕೀಯ ವಿಭಾಗದ ನಾಯಕಿಯನ್ನು ನಿರಾಶ್ರಿತ ಶಿಬಿರದಿಂದ ಬಂಧಿಸಿದ ಘಟನೆ ನಡೆದಿದೆ. ಉತ್ತರ ಶ್ರೀಲಂಕಾದ ಗುಂಡು ಹಾರಾಟ ನಿಷೇಧ ಪ್ರದೇಶದಿಂದ ಸರ್ಕಾರಿ ನಿಯಂತ್ರಿತ ಪ್ರದೇಶಗಳಿಗೆ ಈ ಮಹಿಳೆ ದಾಟಿದ್ದಳು.

ಮಿಲಿಟರಿ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ಮುಲ್ಲೈತಿವುನಿಂದ ಇತರೆ ನಾಗರಿಕರ ಜತೆ ಸಂತ್ರಸ್ತರ ಶಿಬಿರಕ್ಕೆ ಆಗಮಿಸಿದ ಸುಬ್ರಮಣಿಯಂ ಶಿವತಾಯಿ ಅಲಿಯಾಸ್ ತಮಿಳಿನಿಯನ್ನು ವಾಯುನಿಯದ ಗ್ರಾಮವೊಂದರಲ್ಲಿ ಬಂಧಿಸಲಾಯಿತು ಎಂದು ಮಾಧ್ಯಮದ ವರದಿ ತಿಳಿಸಿದೆ.ಇತರೆ ನಾಗರಿಕರ ಜತೆ ಎಲ್‌ಟಿಟಿಇ ಹಿಡಿತದ ಪ್ರದೇಶವನ್ನು ಬಿಡುವಾಗ ತಮಿಳಿನಿ ತನ್ನ ಸಯಾನೈಡ್ ಗುಳಿಗೆ ಮತ್ತು ಬಂದೂಕನ್ನು ಎಸೆದಿದ್ದಳೆಂದು ವರದಿಯಾಗಿದೆ.

ಪುತುಮತಾಲನ್‌ನಿಂದ ತಲೆತಪ್ಪಿಸಿಕೊಂಡು ಸರ್ಕಾರಿ ನಿಯಂತ್ರಿತ ಪ್ರದೇಶಕ್ಕೆ ತಮಿಳಿನಿ ಆಗಮಿಸಿದ್ದು, ಪೊಲೀಸರ ವಿಶೇಷ ತಂಡ ಬಂಧಿಸಿದಾಗ ಆಕೆಯ ತಾಯಿ ಮತ್ತು ಸೋದರಿ ಸಹ ಜತೆಯಲ್ಲಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾನು ಸಯನೈಡ್ ಗುಳಿಗೆ ಮತು ಪಿಸ್ತೂಲನ್ನು ಎಸೆದು ಸಂತ್ರಸ್ತ ಮಹಿಳೆಯ ಸೋಗಿನಲ್ಲಿ ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಎಲ್‌ಟಿಟಿಇಯನ್ನು 1991ರಲ್ಲಿ ಸೇರಿದ ಆಕೆ ಶ್ರೀಲಂಕಾ ಸೇನೆಯ ಜತೆ ಸಂಘರ್ಷದಲ್ಲಿ ನಾಯಕಿ ನೆಸ್ಮಿಯಾ ಮೃತಪಟ್ಟ ಬಳಿಕ ಸಂಘಟನೆಯ ರಾಜಕೀಯ ಮುಖ್ಯಸ್ಥೆಯ ಸ್ಥಾನಕ್ಕೆ ಏರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತರ ಕೊರಿಯದಿಂದ ಮತ್ತೊಂದು ಕ್ಷಿಪಣಿ
ದಿಗ್ಬಂಧನ ಹೇರಿದರೆ ಸ್ವಯಂರಕ್ಷಣೆಗೆ ಕ್ರಮ: ಉ.ಕೊರಿಯ
ಭಾರತದ 'ಆಕಾಶದಲ್ಲಿ ಕಣ್ಣು' ಪಾಕಿಸ್ತಾನಕ್ಕೆ ಅಸೂಯೆ
ಲಂಕಾ ಕಡಲತೀರದಲ್ಲಿ ತಮಿಳರ ರಹಸ್ಯ ಕಗ್ಗೊಲೆ
ಇರಾನ್ ಮಸೀದಿಯಲ್ಲಿ ಬಾಂಬ್ ಸ್ಫೋಟಕ್ಕೆ 15 ಬಲಿ
ನಮ್ಮ ವಿದ್ಯಾರ್ಥಿಗಳ ಮೇಲೆ ದಾಳಿ ನಿಲ್ಲಬೇಕು: ಭಾರತ