ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫಜಲುಲ್ಲಾ ತಲೆಗೆ ಐದು ಕೋಟಿ ರೂಪಾಯಿ ಬಹುಮಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಜಲುಲ್ಲಾ ತಲೆಗೆ ಐದು ಕೋಟಿ ರೂಪಾಯಿ ಬಹುಮಾನ
ಪ್ರಕ್ಷುಬ್ಧ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ಪ್ರವೇಶಿಸುತ್ತಿರುವ ನಡುವೆ, ಪಾಕಿಸ್ತಾನ ಸರ್ಕಾರವು ತಾಲಿಬಾನ್ ನಾಯಕ ಮೌಲಾನಾ ಫಜಲುಲ್ಲಾ ತಲೆಗೆ ಇರಿಸಿರುವ ಬಹುಮಾನದ ಮೊತ್ತವನ್ನು 10 ಪಟ್ಟು ಹೆಚ್ಚಿಸಿದ್ದು 50 ಮಿಲಿಯ ಅಥವಾ 5 ಕೋಟಿ ರೂಪಾಯಿಯೆಂದು ಘೋಷಿಸಿದೆ. ಅಕ್ರಮ ರೇಡಿಯೊ ನಿಲ್ದಾಣ ನಡೆಸುತ್ತಿರುವ ಫಜಲುಲ್ಲಾ ಕಡಿದಾದ ಪರ್ವತಗಳಲ್ಲಿ ಅಜ್ಞಾತ ಸ್ಥಳವೊಂದರಲ್ಲಿ ಅಡಗಿದ್ದಾನೆ.

ಕಳೆದ ಎರಡು ವಾರದಿಂದ ಅವನ ರೇಡಿಯೋ ಪ್ರಸಾರ ಸ್ಥಗಿತಗೊಂಡಿದ್ದು, ಮಿಲಿಟರಿ ದಾಳಿಯಲ್ಲಿ ಫಜಲುಲ್ಲಾ ಹತನಾಗಿದ್ದಾನೆಂದು ಪಾಶ್ಚಿಮಾತ್ಯ ಮಾಧ್ಯಮದ ಖಚಿತಪಡಿಸದ ವರದಿಗಳು ತಿಳಿಸಿದ್ದವು. ಆದರೆ ಫಜಲುಲ್ಲಾ ಜೀವಂತವಾಗಿದ್ದಾನೆಂದೇ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ನಂಬಿದ್ದಾರೆ. 21 ತಾಲಿಬಾನ್ ಕಮಾಂಡರ್‌ಗಳ ಸುಳಿವಿನ ಬಗ್ಗೆ ಮಾಹಿತಿ ನೀಡುವವರಿಗೆ ಗಡಿಪ್ರಾಂತೀಯ ಸರ್ಕಾರ ಈಗಾಗಲೇ ಬಹುಮಾನಗಳನ್ನು ಘೋಷಿಸಿದೆ.

ತಾಲಿಬಾನ್ ದೌರ್ಜನ್ಯಗಳಿಗೆ ತೆರೆಎಳೆಯಲು ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಪಾಕಿಸ್ತಾನ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ವರದಿಗಾರರಿಗೆ ತಿಳಿಸಿದರು. ಹೊಸ ಬಹುಮಾನದ ಬಗ್ಗೆ ಸರ್ಕಾರ ಸ್ಥಳೀಯ ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸಿದೆ. ಶಾಮೋಝಾಯಿನಲ್ಲಿ ವಾಯುದಾಳಿಯಿಂದ ಫಜಲುಲ್ಲಾ ಸತ್ತಿದ್ದಾನೆಂದು ದೃಢಪಡದ ವರದಿಗಳು ತಿಳಿಸಿದ್ದವು. ಆದರೆ ಭದ್ರತಾ ಪಡೆಗಳಿಗೆ ಫಜಲುಲ್ಲಾ ದೇಹ ಸಿಕ್ಕಿಲ್ಲದಿರುವುದರಿಂದ ಫಜಲುಲ್ಲಾ ಇನ್ನೂ ಬದುಕಿದ್ದಾನೆಂದೇ ಭಾವಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನ್: ಕಾರ್ಯಾಚರಣೆಗೆ 35 ಉಗ್ರರ ಬಲಿ
ಕ್ಷಮೆ ಕೋರಿದ ಆಸೀಸ್; ವಿದ್ಯಾರ್ಥಿಗಳ ರಕ್ಷಣೆಗೆ ಒತ್ತು
ಸಂತ್ರಸ್ತರ ಶಿಬಿರದಲ್ಲಿ ಎಲ್‌ಟಿಟಿಇ ಮಹಿಳಾನಾಯಕಿ ಪತ್ತೆ
ಉತ್ತರ ಕೊರಿಯದಿಂದ ಮತ್ತೊಂದು ಕ್ಷಿಪಣಿ
ದಿಗ್ಬಂಧನ ಹೇರಿದರೆ ಸ್ವಯಂರಕ್ಷಣೆಗೆ ಕ್ರಮ: ಉ.ಕೊರಿಯ
ಭಾರತದ 'ಆಕಾಶದಲ್ಲಿ ಕಣ್ಣು' ಪಾಕಿಸ್ತಾನಕ್ಕೆ ಅಸೂಯೆ