ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್‌ ಜಲಗರ್ಭದಲ್ಲಿ ಮುಳುಗಿದ ದುರಂತದಲ್ಲಿ ಬದುಕುಳಿದ ಕಟ್ಟಕಡೆಯ ಮಹಿಳೆ ಮಿಲ್ಲಿವಿನಾ ಡೀನ್ ಭಾನುವಾರ ಇಂಗ್ಲೆಂಡ್‌ನಲ್ಲಿ ಅಸುನೀಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಡೀನ್ ಅವರು ಟೈಟಾನಿಕ್ ಮುಳುಗಿದಾಗ 2 ತಿಂಗಳ ಹಸುಳೆಯಾಗಿದ್ದಳು. ಅಮೆರಿಕದ ಕನ್ಸಾಸ್‌ಗೆ ಕುಟುಂಬ ಪ್ರಯಾಣಿಸುತ್ತಿದ್ದಾಗ ಟೈಟಾನಿಕ್ ನೀರ್ಗಲ್ಲಿಗೆ ಬಡಿದು ದುರಂತ ಅಂತ್ಯ ಕಂಡಿತ್ತು.

ಡೀನ್‌ರನ್ನು ಚೀಲವೊಂದರಲ್ಲಿ ಇರಿಸಿ ಜೀವರಕ್ಷಕ ದೋಣಿಯಲ್ಲಿ ಸುರಕ್ಷಿತವಾಗಿ ಸಾಗಿಸಲಾಗಿತ್ತು. ಆಕೆಯ ತಾಯಿ ಮತ್ತು ಸೋದರ ಕೂಡ ಈ ದುರಂತದಲ್ಲಿ ಬದುಕುಳಿದಿದ್ದರೆ, ಆಕೆಯ ತಂದೆಯು ದುರಂತ ಸಾವಪ್ಪಿದ 1500 ಪ್ರಯಾಣಿಕರಲ್ಲಿ ಒಬ್ಬರಾಗಿದ್ದಾರೆ.ಹಾಂಪ್‌ಷೈರಿನಲ್ಲಿ ಆರೈಕೆ ಗೃಹದಲ್ಲಿ ಅವರು ಸತ್ತಿದ್ದಾರೆಂದು ಡೀನ್ಸ್ ಅವರ ಇಬ್ಬರು ಸ್ನೇಹಿತರು ಬಿಬಿಸಿಗೆ ತಿಳಿಸಿದ್ದಾರೆ.

ತಮ್ಮ ಜೀವಮಾನದ ಬಹುತೇಕ ಕಾಲವನ್ನು ಅವರು ಸೌತಾಂಪ್ಟನ್‌ನಲ್ಲಿ ಕಳೆದಿದ್ದಾರೆ. ಜೀವನದ ಕಡೆಯ ಕಾಲದಲ್ಲಿ ಅವರು ಆರ್ಥಿಕ ದುಸ್ಥಿತಿಗೆ ಗುರಿಯಾಗಿದ್ದರು. ತಾವು ಕಳೆದ ಆರೈಕೆ ಗೃಹದಲ್ಲಿ ಬಿಲ್ ಪಾವತಿ ಮಾಡುವುದಕ್ಕಾಗಿ ತಮ್ಮ ವಸ್ತುಗಳನ್ನು ಹರಾಜು ಹಾಕಿ 54,900 ಡಾಲರ್ ಎತ್ತಿದ್ದರು.

ಟೈಟಾನಿಕ್ ದುರಂತದಲ್ಲಿ ಪಾರಾದ ಕುಟುಂಬಕ್ಕೆ ನ್ಯೂಯಾರ್ಕ್ ಜನತೆ ಕೊಡುಗೆಯಾಗಿ ನೀಡಿದ್ದ 100 ವರ್ಷದಷ್ಟು ಹಳೆಯದಾದ ಸೂಟ್‌ಕೇಸ್‌ನ್ನು ಕೂಡ ಅವರು ಮಾರಾಟ ಮಾಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
20,000 ನಾಗರಿಕರ ಹತ್ಯೆ ಕಪೋಲಕಲ್ಪಿತ: ಶ್ರೀಲಂಕಾ
ಆಸ್ಟ್ರೇಲಿಯದಲ್ಲಿ 18 ಭಾರತೀಯ ಯುವಕರ ಬಂಧನ
ಪಾಕ್: 50 ತಾಲಿಬಾನಿಗಳ ಹತ್ಯೆ
ದಕ್ಷಿಣ ಕೊರಿಯ: ಎಚ್1ಎನ್1 ಸೋಂಕು ಪತ್ತೆ
ಚೀನಾ: ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆ; 25 ಬಲಿ
ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ