ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ
ಸ್ವಾತ್‌ ಕಣಿವೆಯಲ್ಲಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆ ಫಲವಾಗಿ ಸಂತ್ರಸ್ತರಾದ ಲಕ್ಷಾಂತರ ಜನರನ್ನು ಇರಿಸಿದ ನಿರಾಶ್ರಿತ ಶಿಬಿರಗಳಿಗೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕಳಿಸಲಿದ್ದಾರೆ.

ಹಾಲ್‌ಬ್ರೂಕ್ ಪರಿಸ್ಥಿತಿಯ ಪ್ರಥಮ ಮಾಹಿತಿ ಪಡೆಯುವರೆಂದು ನಿರೀಕ್ಷಿಸಲಾಗಿದ್ದು, ಸಂತ್ರಸ್ತರಿಗೆ ಪರಿಹಾರ ಕ್ರಮಗಳನ್ನು ಕ್ಷಿಪ್ರಗತಿಯಲ್ಲಿ ನಡೆಸುವುದು ಹೇಗೆಂಬ ಬಗ್ಗೆ ವಿಚಾರಮಂಥನ ನಡೆಸಲಿದ್ದಾರೆಂದು ಮ‌ೂಲಗಳು ತಿಳಿಸಿವೆ. ಪಾಕಿಸ್ತಾನ ಆರಂಭದಲ್ಲಿ ಪ್ರತಿರೋಧ ಒಡ್ಡಿದರೂ ಅಮೆರಿಕದ ಒತ್ತಡದಿಂದ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆಯೆಂದು ವಿಶ್ಲೇಷಿಸಲಾಗಿದೆ.

ಸುಮಾರು ಮ‌ೂವತ್ತು ಲಕ್ಷ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ನಡೆಸಲು ಅಂತಾರಾಷ್ಟ್ರೀಯ ನೆರವು ಕ್ರೋಢೀಕರಣವು ತನ್ನ ಕರ್ತವ್ಯವೆಂದು ಒಬಾಮಾ ಆಡಳಿತ ಭಾವಿಸಿದೆ. ಸರ್ಕಾರಿ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಕದನದಲ್ಲಿ ಸಂತ್ರಸ್ತರಾದವರಿಗೆ 543 ಮಿಲಿಯ ಅಮೆರಿಕ ಡಾಲರ್ ನೆರವನ್ನು ವಿಶ್ವಸಂಸ್ಥೆ ಕೋರಿದೆ. ವಿಶ್ವಸಂಸ್ಥೆ ಹೈಕಮೀಷನರ್ ಪ್ರಕಾರ, ಶೇ.10ರಷ್ಟು ಸಂತ್ರಸ್ತರು ಶಿಬಿರಗಳಲ್ಲಿ ತಂಗಿದ್ದರೆ ಉಳಿದವರು ತಮ್ಮ ಸ್ನೇಹಿತರು ಅಥವಾ ಶಾಲೆ ಮುಂತಾದ ಸಮುದಾಯ ಕಟ್ಟಡಗಳಲ್ಲಿ ವಾಸವಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
20,000 ನಾಗರಿಕರ ಹತ್ಯೆ ಕಪೋಲಕಲ್ಪಿತ: ಶ್ರೀಲಂಕಾ
ಆಸ್ಟ್ರೇಲಿಯದಲ್ಲಿ 18 ಭಾರತೀಯ ಯುವಕರ ಬಂಧನ
ಪಾಕ್: 50 ತಾಲಿಬಾನಿಗಳ ಹತ್ಯೆ
ದಕ್ಷಿಣ ಕೊರಿಯ: ಎಚ್1ಎನ್1 ಸೋಂಕು ಪತ್ತೆ
ಚೀನಾ: ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆ; 25 ಬಲಿ