ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಹಲ್ಲೆ
ಆಸ್ಟ್ರೇಲಿಯದಲ್ಲಿ ಜನಾಂಗೀಯ ದ್ವೇಷದ ದಾಳಿಗಳಿಗೆ ಪ್ರತಿಭಟನೆ ಸೂಚಿಸಲು ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ರ‌‌್ಯಾಲಿ ನಡೆದ ಬೆನ್ನಲ್ಲೇ ಹೈದಾರಾಬಾದ್‌ನ ಟ್ಯಾಕ್ಸಿ ಚಾಲಕನೊಬ್ಬನಿಗೆ ಆಸ್ಟ್ರೇಲಿಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿದೆ.

35 ವರ್ಷ ವಯಸ್ಸಿನ ಟ್ಯಾಕ್ಸಿ ಚಾಲಕ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನನ್ನು ಬ್ಲಾಕ್‌ಬರ್ನ್ ಉಪನಗರದ ಚಾಪೆಲ್ ಬೀದಿಯಲ್ಲಿ ಹತ್ತಿಸಿಕೊಂಡಿದ್ದ. ಬ್ಲಾಕ್‌ಬರ್ನ್ ತಲುಪಿದ ಬಳಿಕ ರಿಂಗ್‌‍ವುಡ್‌ಗೆ ತೆರಳುವಂತೆ ಪ್ರಯಾಣಿಕ ತಿಳಿಸಿದ್ದು, ಅಷ್ಟರಲ್ಲಿ ಟ್ಯಾಕ್ಸಿ ಟೈರ್ ಒಡೆಯಿತೆಂದು ಹೇಳಲಾಗಿದೆ.

ಇದರಿಂದ ಮತ್ತಷ್ಟು ದೂರ ತೆರಳಲು ಚಾಲಕ ತನ್ನ ಅಸಹಾಯಕತೆ ತೋಡಿಕೊಂಡಾಗ ಪ್ರಯಾಣಿಕ ದೂಷಣೆ ಆರಂಭಿಸಿದ.ಬಳಿಕ ದಾಳಿಕೋರ ತನಗೆ ಗುದ್ದಿದ್ದರಿಂದ ಮುಖ, ಕಾಲು ಮತ್ತು ಕೈಗಳಲ್ಲಿ ಗಾಯಗಳಾಗಿದ್ದು ಎರಡು ಹಲ್ಲುಗಳು ಮುರಿದಿದ್ದಾಗಿ ದಾಳಿಯ ಬಳಿಕ ಪ್ರಜ್ಞೆತಪ್ಪಿದ್ದ ಚಾಲಕ ತಿಳಿಸಿದ್ದಾನೆ.ವ್ಯಕ್ತಿಯನ್ನು ಬಳಿಕ ಆಲ್‌ಫ್ರೆಡ್ ಆಸ್ಪತ್ರೆಗೆ ಸೇರಿಸಲಾಯಿತೆಂದು ತಿಳಿದುಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ
ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
20,000 ನಾಗರಿಕರ ಹತ್ಯೆ ಕಪೋಲಕಲ್ಪಿತ: ಶ್ರೀಲಂಕಾ
ಆಸ್ಟ್ರೇಲಿಯದಲ್ಲಿ 18 ಭಾರತೀಯ ಯುವಕರ ಬಂಧನ
ಪಾಕ್: 50 ತಾಲಿಬಾನಿಗಳ ಹತ್ಯೆ
ದಕ್ಷಿಣ ಕೊರಿಯ: ಎಚ್1ಎನ್1 ಸೋಂಕು ಪತ್ತೆ