ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಾಯಿಗಳೇ ಬೆಳೆಸಿದ ಮೋಗ್ಲಿ ಬಾಲಕಿ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಯಿಗಳೇ ಬೆಳೆಸಿದ ಮೋಗ್ಲಿ ಬಾಲಕಿ ಪತ್ತೆ
ನಾಯಿಯಂತೆ ನಡೆಯುವ, ಆಹಾರವನ್ನು ನೆಕ್ಕುವ ನಾಲಗೆಯಲ್ಲಿ ಕುಡಿಯುವ ಮತ್ತು ಬೊಗಳುವ ಮ‌ೂಲಕ ಸಂಜ್ಞೆ ಮಾಡುವ ನಾಯಿಯ ಸ್ವರೂಪದ ಬಾಲಕಿ ಸೈಬೀರಿಯದಲ್ಲಿ ಪತ್ತೆಯಾಗಿದ್ದು ಆಕೆಗೆ ಮೋಗ್ಲಿ ಎಂದೇ ಅಡ್ಡಹೆಸರು ಬಂದಿದೆ. ಬಾಲಕಿಯನ್ನು ಚಿಕ್ಕಹಸುಳೆಯಾಗಿದ್ದಾಗಲೇ ನಾಯಿಗಳು ಸಾಕಿ ಸಲಹಿದ್ದರಿಂದ ನಾಯಿಯ ಸ್ವಭಾವ, ಲಕ್ಷಣಗಳನ್ನು ಬೆಳೆಸಿಕೊಂಡಿದ್ದಾಳೆ.

ನಟಾಶಾ ಮಿಕೈಲೋವಾ ತನ್ನ ತಂದೆ ಮತ್ತು ಅಜ್ಜಅಜ್ಜಿಯರ ಜತೆ ವಾಸವಿದ್ದ ಮ‌ೂರು ಕೋಣೆಗಳ ಫ್ಲ್ಯಾಟ್‌ನಿಂದ ಹೊರಕ್ಕೆ ಕಾಲಿಟ್ಟಿಲ್ಲ. ನಾಯಿಗಳು ಮತ್ತು ಬೆಕ್ಕುಗಳಿಂದ ಸುತ್ತುವರಿದು, ಹರಕಾದ, ಮಣ್ಣಿನಿಂದ ಕೂಡಿದ ಬಟ್ಟೆಗಳನ್ನು ಬಾಲಕಿ ತೊಟ್ಟಿದ್ದನ್ನು ಗಮನಿಸಿದ ಆಕೆಯ ನೆರಮನೆಯವರು ಈ ಬಗ್ಗೆ ಸುಳಿವು ನೀಡಿದ ಬಳಿಕ ನಾಯಿಯ ರೂಪದ ಬಾಲಕಿ ಬೆಳಕಿಗೆ ಬಂದಳು.ಸುಮಾರು ಐದು ವರ್ಷಗಳವರೆಗೆ ನಾಯಿಗಳು ಮತ್ತು ಬೆಕ್ಕುಗಳ ಸಂಗದಲ್ಲೇ ಬೆಳೆದಿದ್ದ ಬಾಲಕಿ ಮನೆಯಿಂದ ಹೊರಕ್ಕೆ ಕಾಲಿಡುತ್ತಿರಲಿಲ್ಲವೆಂದು ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.

ಸೈಬೀರಿಯದ ನೆರೆಮನೆಯೊಬ್ಬರು ಹೇಳುವ ಪ್ರಕಾರ, ಆಕೆ ಜೀವಂತವಿರುವುದು ತಿಳಿದೇ ಇರಲಿಲ್ಲ. ಮ‌ೂರು ಕ್ರೂರಮುಖದ ನಾಯಿಗಳ ಜತೆ ವಿಹಾರಕ್ಕೆ ಮನೆಯವರು ತೆರಳಿದ್ದು ತಾವು ಕಂಡಿದ್ದರೂ, ಬಾಲಕಿಯನ್ನು ಮಾತ್ರ ನೋಡಿರಲಿಲ್ಲವೆಂದು ಹೇಳಿದ್ದಾರೆ.ಪ್ರಾಣಿಗಳೇ ಬೆಳೆಸಿದ ಜಂಗಲ್ ಬುಕ್ ಪಾತ್ರದ ಮೋಗ್ಲಿಯ ಅಡ್ಡ ಹೆಸರನ್ನು ಹೊಂದಿದ ನಟಾಶಾ ಈಗ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದು ಮಾನವರ ಮೇಲೆ ಎರಗುವ, ನಾಯಿಗಳ ರೀತಿ ಆಟವಾಡುವ ಪರಿ ನೋಡಿ ತಜ್ಞರು ಆಘಾತಕ್ಕೊಳಗಾಗಿದ್ದಾರೆ.

ಬಾಲಕಿ ಮಾನಸಿಕ ಅಸ್ವಸ್ಥಳಲ್ಲವೆಂದು ತಜ್ಞರು ಹೇಳಿದ್ದು, ಮಾನವ ಸಂಪರ್ಕ ತಪ್ಪಿಹೋಗಿದ್ದರಿಂದ ಮತ್ತು ಇತರೆ ಮಕ್ಕಳ ಜತೆ ಒಡನಾಟವಿಲ್ಲದ್ದರಿಂದ ಈ ಬೆಳವಣಿಗೆ ಉಂಟಾಗಿದೆಯೆಂದು ಹೇಳಿದ್ದಾರೆ.ತಾವು ಕೋಣೆಯಿಂದ ಹೊರಕ್ಕೆ ತೆರಳಿದಾಗ ಬಾಲಕಿ ಬಾಗಿಲಿನತ್ತ ಹಾರಿ ಬೊಗಳಲು ಆರಂಭಿಸಿದಳು. ಅವಳು ಪ್ಲೇಟ್‌ನಿಂದ ಆಹಾರ ನೆಕ್ಕುತ್ತಿದ್ದಳು ಎಂದು ಕೇಂದ್ರದ ಬಾಸ್ ನೀನಾ ಯೆಮೆಲ್ಚುಗೋವಾ ತಿಳಿಸಿದ್ದಾರೆ.

ನಟಾಶಾ ತಂದೆ ವಿಕ್ಟರ್ ಲೋಜ್ಕಿನ್ ಮತ್ತು ತಾಯಿ ಯಾನಾ ಮಿಕೈಲೋವಾಗೆ ಪುತ್ರಿಯ ಜತೆ ಎರಡು ವರ್ಷ ಸಂಪರ್ಕವೇ ಇರಲಿಲ್ಲವೆಂದು ಹೇಳಲಾಗಿದ್ದು, ನಿರ್ಲಕ್ಷ್ಯದ ಆರೋಪದ ಮೇಲೆ ಅವರಿಬ್ಬರನ್ನು ಬಂಧಿಸಲಾಗಿದ್ದು, ಮ‌ೂರು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಹಲ್ಲೆ
ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ
ಟೈಟಾನಿಕ್ ದುರಂತ: ಬದುಕುಳಿದ ಕೊನೆಯ ಮಹಿಳೆ ಸಾವು
20,000 ನಾಗರಿಕರ ಹತ್ಯೆ ಕಪೋಲಕಲ್ಪಿತ: ಶ್ರೀಲಂಕಾ
ಆಸ್ಟ್ರೇಲಿಯದಲ್ಲಿ 18 ಭಾರತೀಯ ಯುವಕರ ಬಂಧನ
ಪಾಕ್: 50 ತಾಲಿಬಾನಿಗಳ ಹತ್ಯೆ