ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ಲುಟೋನಿಯಂ: ಪಾಕಿಸ್ತಾನಕ್ಕೆ ಚೀನಾ ನೆರವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ಲುಟೋನಿಯಂ: ಪಾಕಿಸ್ತಾನಕ್ಕೆ ಚೀನಾ ನೆರವು
ಪ್ಲುಟೋನಿಯಂ ಆಧಾರಿತ ಅಣ್ವಸ್ತ್ರ ಕಾರ್ಯಕ್ರಮ ಅಭಿವೃದ್ಧಿಗೆ ಚೀನಾ ರಾಷ್ಟ್ರವು ಪಾಕಿಸ್ತಾನಕ್ಕೆ ನೆರವು ನೀಡುತ್ತಿದೆಯೆಂದು ಅಮೆರಿಕ ಸಂಸತ್ತಿನ ವರದಿಯೊಂದು ತಿಳಿಸಿದೆ. ಸಾಂಪ್ರದಾಯಿಕ ಯುರೇನಿಯಂ ಆಧಾರಿತ ಅಣ್ವಸ್ತ್ರವಲ್ಲದೇ, ಪ್ಲುಟೋನಿಯಂ ಆಧಾರಿತ ಅಣ್ವಸ್ತ್ರ ಸಿಡಿತಲೆಗಳ ತಯಾರಿಕೆಗೆ ಪಾಕ್ ಯತ್ನಿಸಿದ್ದು ಶಸ್ತ್ರಾಸ್ತ್ರಗಳಿಗೆ ಪ್ಲುಟೋನಿಯಂ ತಯಾರಿಕೆ ಮುಂದುವರಿಸಿದೆಯೆಂದು ಕಾಂಗ್ರೆಸ್ ಸಂಶೋಧನಾ ಸೇವೆಯು ರಾಷ್ಟ್ರದ ಪರಮಾಣು ಕಾರ್ಯಕ್ರಮದ ಬಗ್ಗೆ ತಿಳಿಸಿದೆ.

ಪ್ಲುಟೋನಿಯಂ ಆಧಾರಿತ ಕಾರ್ಯಕ್ರಮಕ್ಕೆ ಪಾಕಿಸ್ತಾನ ಚೀನಾದ ನೆರವನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಸಂಶೋಧನಾ ದಳವಾದ ಸಿಆರ್‌ಎಸ್ ವರದಿ ತಿಳಿಸಿದೆ. 40-50 ಮೆಗಾವಾಟ್ ಭಾರಜಲದ ಕುಶಬ್ ಪ್ಲುಟೋನಿಯಂ ಉತ್ಪಾದನೆ ಸ್ಥಾವರವು 1998ರಿಂದ ಕಾರ್ಯನಿರ್ವಹಿಸುತ್ತಿದೆ. ಇಸ್ಲಾಮಾಬಾದ್ ಎರಡು ಹೆಚ್ಚುವರಿ ಭಾರೀ ಜಲ ಸ್ಥಾವರಗಳನ್ನು ನಿರ್ಮಿಸುತ್ತಿದ್ದು, ಪಾಕಿಸ್ತಾನದ ಪ್ಲುಟೋನಿಯಂ ಉತ್ಪಾದನೆ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸುತ್ತದೆಂದು ವರದಿ ಹೇಳಿದೆ.

ಪಾಕಿಸ್ತಾನವು ಭಾರತದತ್ತ 60 ಅಣ್ವಸ್ತ್ರ ಸಿಡಿತಲೆಗಳನ್ನು ಗುರಿಯಿರಿಸಿದೆಯೆಂದು ಸಮಿತಿಯು ಕಳೆದವಾರ ದೃಢಪಡಿಸಿತ್ತು. ವಿದಳನ ವಸ್ತುಗಳ ಉತ್ಪಾದನೆ ಮತ್ತು ಶಸ್ತ್ರಾಸ್ತ್ರ ಉತ್ಪಾದನೆ ಸೌಲಭ್ಯಗಳು ಮತ್ತು ಉಡಾವಣೆ ವಾಹನಗಳನ್ನು ಕೂಡ ಪಾಕಿಸ್ತಾನ ಹೆಚ್ಚಿಸಿಕೊಳ್ಳುತ್ತಿದೆಯೆಂದು ಸಮಿತಿ ವರದಿ ಮಾಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಲೇಶಿಯ ರಾಜಕುಮಾರನ ದೌರ್ಜನ್ಯ: ರೂಪದರ್ಶಿ ದೂರು
ಫ್ರಾನ್ಸ್ ವಿಮಾನ ನಾಪತ್ತೆ: ತೀವ್ರ ಶೋಧ ಆರಂಭ
ಪಾಕ್ ಬಾಂಬ್ ಸ್ಫೋಟದಲ್ಲಿ ನಾಲ್ವರ ಸಾವು
ನಾಯಿಗಳೇ ಬೆಳೆಸಿದ ಮೋಗ್ಲಿ ಬಾಲಕಿ ಪತ್ತೆ
ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಹಲ್ಲೆ
ಪಾಕ್ ನಿರಾಶ್ರಿತ ಶಿಬಿರಗಳಿಗೆ ಹಾಲ್‌ಬ್ರೂಕ್ ಭೇಟಿ