ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫ್ರಾನ್ಸ್ ವಿಮಾನ ಅಪಘಾತ: 228 ಸಾವಿನ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫ್ರಾನ್ಸ್ ವಿಮಾನ ಅಪಘಾತ: 228 ಸಾವಿನ ಶಂಕೆ
ಸಂಪರ್ಕ ಕಳೆದುಕೊಂಡಿದ್ದ ಏರ್ ಫ್ರಾನ್ಸ್ ವಿಮಾನವು ಅಪಘಾತಕ್ಕೀಡಾಗಿ ಅಟ್ಲಾಂಟಿಕ್ ಸಾಗರಕ್ಕೆ ಮುಳುಗಿದೆ ಎಂದು ಭೀತಿ ಪಡಲಾಗಿದೆ. ಇದರಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 228 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ವಿಮಾನಕ್ಕೆ ಸಿಡಿಲು ಬಡಿದ ಕಾರಣ ವಿದ್ಯುತ್ ವೈಫಲ್ಯ ಸಂಭವಿಸಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ. "ವಿಮಾನಕ್ಕೆ ಸಿಡಿಲು ಬಡಿದಿರಬಹುದು ಎಂಬುದು ಹೆಚ್ಚು ಸಂಭವನೀಯ ಅಂಶ. ವಿಮಾನವು ಬಿರುಗಾಳಿಯ ಪ್ರದೇಶದಲ್ಲಿತ್ತು. ಇದರಿಂದಾಗಿ ಸಮಸ್ಯೆಯುಂಟಾಗಿದೆ" ಎಂಬುದಾಗಿ ಏರ್ ಫ್ರಾನ್ಸಿನ ಸಂಪರ್ಕಗಳ ನಿರ್ದೇಶಕ ಫ್ರಾಂಕೋಯ್ಸ್ ಬ್ರೌಸ್ ಅವರು ಹೇಳಿದ್ದಾರೆ.

ಪ್ಯಾರಿಸ್ ಸಿಸ್ಟಮ್‌ಗಳು 0214 ಜಿಎಂಟಿ ವೇಳೆಗೆ ದೋಷ ಸಂದೇಶ ಕಳುಹಿಸಿದ್ದು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ನಲ್ಲಿ ದೋಷದ ಸೂಚನೆ ನೀಡಿತ್ತು ಎಂಬುದಾಗಿ ಏರ್‌ಫ್ರಾನ್ಸ್‌ನ ಹೇಳಿಕೆ ತಿಳಿಸಿದೆ, ಆ ವೇಳೆಗೆ ಪ್ಯಾರಿಸ್‌ನತ್ತ ತೆರಳುವ ವಿಮಾನವು ರಿಯೋ ಡಿ ಜನೈರೋದಲ್ಲಿತ್ತು ಎಂದು ಅದು ಹೇಳಿದೆ.

ವಿಮಾನದ ಅವಶೇಷಗಳಿಗಾಗಿ ಅಟ್ಲಾಂಟಿಕ್ ಸಾಗರದಲ್ಲಿ ತೀವ್ರ ಶೋಧ ಮುಂದುವರಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್: ಬಾಂಬ್ ಸ್ಫೋಟಕ್ಕೆ ನಾಲ್ಕು ಬಲಿ
ಇಸ್ರೇಲ್: ಎಚ್1ಎನ್1 ಸೋಂಕು ಪತ್ತೆ
ಪ್ಲುಟೋನಿಯಂ: ಪಾಕಿಸ್ತಾನಕ್ಕೆ ಚೀನಾ ನೆರವು
ಮಲೇಶಿಯ ರಾಜಕುಮಾರನ ದೌರ್ಜನ್ಯ: ರೂಪದರ್ಶಿ ದೂರು
ಫ್ರಾನ್ಸ್ ವಿಮಾನ ನಾಪತ್ತೆ: ತೀವ್ರ ಶೋಧ ಆರಂಭ
ಪಾಕ್ ಬಾಂಬ್ ಸ್ಫೋಟದಲ್ಲಿ ನಾಲ್ವರ ಸಾವು