ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್ ಉಗ್ರರಿಂದ 80 ಮಂದಿ ಪಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ ಉಗ್ರರಿಂದ 80 ಮಂದಿ ಪಾರು
ಪಾಕಿಸ್ತಾನದ ವಾಜಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್‌ ಉಗ್ರಗಾಮಿಗಳಿಂದ ಅಪಹರಣಕ್ಕೆ ಒಳಗಾದ ಕೆಡೆಟ್ ಕಾಲೇಜಿನ 80 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸೇನೆ ಪಾರು ಮಾಡುವುದರೊಂದಿಗೆ ಒತ್ತೆಯಾಳು ನಾಟಕ ಸುಖಾಂತ್ಯ ಕಂಡಿದೆ.

ರಜ್ಮಕ್ ಪಟ್ಟಣಕ್ಕೆ 20 ಕಿಮೀ ಪೂರ್ವದ ಘಾರಿಯೋಂನಲ್ಲಿ ತಾಲಿಬಾನ್ ಜತೆ ನಡೆದ ಗುಂಡಿನ ಕಾಳಗದಲ್ಲಿ ರಜ್ಮಕ್ ಕೆಡೆಟ್ ಕಾಲೇಜಿನ 9 ಸಿಬ್ಬಂದಿ ಮತ್ತು 71 ವಿದ್ಯಾರ್ಥಿಗಳನ್ನು ರಕ್ಷಿಸಿರುವುದಾಗಿ ಮುಖ್ಯ ಮಿಲಿಟರಿ ವಕ್ತಾರ ಮೆ. ಜ. ಅಥಾರ್ ಅಬ್ಬಾಸ್ ತಿಳಿಸಿದ್ದಾರೆ.ಅಪಹೃತ ವಿದ್ಯಾರ್ಥಿಗಳನ್ನು ಉಗ್ರಗಾಮಿಗಳು ನಾಲ್ಕರಿಂದ ಐದು ಕಾರುಗಳಲ್ಲಿ ದಕ್ಷಿಣ ವಾಜಿರಿಸ್ತಾನಕ್ಕೆ ಒಯ್ಯಲು ಇಚ್ಛಿಸಿದ್ದಾಗಿ ಅಬ್ಬಾಸ್ ವರದಿಗಾರರಿಗೆ ತಿಳಿಸಿದರು.

ಸೇನೆಯು ಮುಂಚೂಣಿ ಸೈನಿಕರೊಂದಿಗೆ ಘಾರಿಯೊಂನಲ್ಲಿ ಉಗ್ರಗಾಮಿಗಳ ವಾಹನಗಳನ್ನು ತಡೆದ ಬಳಿಕ ಗುಂಡಿನ ಕಾಳಗ ನಡೆಯಿತೆಂದೂ ಬಳಿಕ ಉಗ್ರಗಾಮಿಗಳು ಪರಾರಿಯಾದರೆಂದು ತಿಳಿದುಬಂದಿದೆ.

ಒಂದು ಗಂಟೆಯ ಬಳಿಕ, 71 ಕೆಡೆಟ್‌ಗಳು ಮತ್ತು 9 ಸಿಬ್ಬಂದಿಯನ್ನು ಪತ್ತೆಹಚ್ಚಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆಂದು ಅವರು ತಿಳಿಸಿದ್ದಾರೆ.ಉತ್ತರ ವಾಜಿರಿಸ್ತಾನ ಮತ್ತು ಬನ್ನು ಜಿಲ್ಲೆಯ ನಡುವೆ ಗಡಿಯಲ್ಲಿರುವ ಬಾಕಾ ಖೇಲ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸೋಮವಾರ ಉಗ್ರಗಾಮಿಗಳು ಅಪಹರಿಸಿದ್ದರು. ವಿದ್ಯಾರ್ಥಿಗಳ ಅಪಹರಣದ ವಿಷಯ ತಿಳಿದ ಬಳಿಕ ಮಿಲಿಟರಿ ದಕ್ಷಿಣ ವಾಜಿರಿಸ್ತಾನದ ಎಲ್ಲ ಮಾರ್ಗಗಳಿಗೆ ತಡೆ ವಿಧಿಸಿತು ಎಂದು ಅವರು ನುಡಿದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫ್ರಾನ್ಸ್ ವಿಮಾನ ಅಪಘಾತ: 228 ಸಾವಿನ ಶಂಕೆ
ಪಾಕ್: ಬಾಂಬ್ ಸ್ಫೋಟಕ್ಕೆ ನಾಲ್ಕು ಬಲಿ
ಇಸ್ರೇಲ್: ಎಚ್1ಎನ್1 ಸೋಂಕು ಪತ್ತೆ
ಪ್ಲುಟೋನಿಯಂ: ಪಾಕಿಸ್ತಾನಕ್ಕೆ ಚೀನಾ ನೆರವು
ಮಲೇಶಿಯ ರಾಜಕುಮಾರನ ದೌರ್ಜನ್ಯ: ರೂಪದರ್ಶಿ ದೂರು
ಫ್ರಾನ್ಸ್ ವಿಮಾನ ನಾಪತ್ತೆ: ತೀವ್ರ ಶೋಧ ಆರಂಭ